ಶನಿವಾರ, ಮೇ 28, 2022
31 °C

'ಕನ್ನಡಿಗ'ನಾದ ರವಿಮಾಮ: ಶಿವಣ್ಣ ಧನಿಯಲ್ಲಿ ಸಿರಿಗನ್ನಡಂ ಏಳ್ಗೆ... 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

್ದೂಯನವನದ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ’ಕನ್ನಡಿಗ’ ಸಿನಿಮಾದ ಟೈಟಲ್‌ ಹಾಡು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. 

ಈ ಹಾಡನ್ನು ಶಿವರಾಜ್‌ ಕುಮಾರ್‌ ಹಾಡಿರುವುದು ವಿಶೇಷ.  ’ಸಿರಿಗನ್ನಡಂ ಏಳ್ಗೆ... ಕನ್ನಡಂ ಬಾಳ್ಗೆ... ಕನ್ನಡ ನಮ್ಮ ಪಾಲ್ಗೆ’ ಎಂಬ ಸಾಲುಗಳ ಹಾಡನ್ನು ಶಿವಣ್ಣ ಅದ್ಬುತವಾಗಿ ಹಾಡಿದ್ದಾರೆ. ಈ ಹಾಡಿಗೆ ರವಿಮಾಮ ಹಾಗೂ ಶಿವಣ್ಣ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

ನಿರ್ದೇಶಕ ಸಂತೋಷ್‌ ಆನಂದ್ ರಾಮ್‌ ಬರೆದಿರುವ ಹಾಡಿಗೆ ಸಂಗೀತ ನಿರ್ದೇಶಕ  ರವಿ ಬಸ್ರೂರ್ ರಾಗ ಸಂಯೋಜನೆ ಮಾಡಿದ್ದಾರೆ. ಈ ಹಾಡು ಮಂಗಳವಾರ ಮಧ್ಯಾಹ್ನ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. 

ಬಿ.ಎಂ.ಗಿರಿರಾಜ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು ಚಿತ್ರೀಕರಣ ನಡೆಯುತ್ತಿದೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ.  ರವಿಚಂದ್ರನ್ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದರಲ್ಲಿ ಗುಣಭದ್ರ ಎಂಬ ಪಾತ್ರ ಮಾಡಿದ್ದಾರೆ.

ಬಿಳಿ ಪಂಚೆ, ಶರ್ಟ್‌, ಗಿರಿಜಾ ಮೀಸೆ ಹಾಗೂ ತಲೆಯ ಮೇಲೆ ಮುಂಡಾಸು ಧರಿಸಿರುವ ರವಿಚಂದ್ರನ್ ಅವರ ಈ ಲುಕ್ ಅಭಿಮಾನಿಗಳ ಮನ ಗೆದ್ದಿದೆ. ಐತಿಹಾಸಿಕ ಕಥಾ ಹಿನ್ನೆಲೆ ಹೊಂದಿರುವ ಸಿನಿಮಾದ ಶೂಟಿಂಗ್ ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ನಡೆಯುತ್ತಿದೆ.

ಓದಿ: ನವೆಂಬರ್ 26ರಂದು ‘ಗೋವಿಂದ, ಗೋವಿಂದ’ ಸಿನಿಮಾ ಬಿಡುಗಡೆ

ಕನ್ನಡ–ಇಂಗ್ಲಿಷ್ ಶಬ್ದಕೋಶವನ್ನು ಹೊರತಂದ ಫರ್ಡಿನಾಂಡ್ ಕಿಟೆಲ್ ಅವರ ಕುರಿತಾದ ಸಿನಿಮಾ ಇದಾಗಿದೆ. ಇದರಲ್ಲಿ ನಟಿ ಪಾವನಾ ರವಿಚಂದ್ರನ್ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ. ಜಯಶ್ರೀ, ಬಾಲಾಜಿ ಮನೋಹರ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ.

ಓದಿ: ನಿಶ್ವಿಕಾ ಜೊತೆ ಡಾರ್ಲಿಂಗ್ ಕೃಷ್ಣನ ‘ದಿಲ್‌ ಪಸಂದ್‌’: ಮೋಡಿ ಮಾಡಿದ ಮೊದಲ ನೋಟ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು