ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತಾರ ಸೆಕೆಂಡ್ ಪಾರ್ಟ್ ಬರವಣಿಗೆ ಆರಂಭ: ಹೊಂಬಾಳೆ ಫಿಲ್ಮ್ಸ್

Last Updated 23 ಮಾರ್ಚ್ 2023, 5:01 IST
ಅಕ್ಷರ ಗಾತ್ರ

ಬೆಂಗಳೂರು: ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಭಾರತೀಯ ಚಿತ್ರರಂಗದಲ್ಲಿ ಮೆಚ್ಚುಗೆ ಗಳಿಸಿತ್ತು.

ಕಾಂತಾರ ಯಶಸ್ಸಿನ ಬೆನ್ನಲ್ಲೆ ಕಾಂತಾರ ಪಾರ್ಟ್ 2 ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಅಧಿಕೃತವಾಗಿರಲಿಲ್ಲ. ಇದೀಗ ಈ ಸಿನಿಮಾ ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಅವರು ಕಾಂತಾರ ಸೆಕೆಂಡ್ ಪಾರ್ಟ್ ಬರಲಿದ್ದು ಬರವಣಿಗೆ (ಸ್ಕ್ರಿಪ್ಟ್) ಆರಂಭವಾಗಿದೆ ಎಂದು ಖಚಿತಪಡಿಸಿದೆ.

ಯುಗಾದಿ ದಿನ ಈ ಕುರಿತು ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, ನಾವು ಹೊಸ ವರ್ಷ ಯುಗಾದಿಯ ಈ ಸಂಭ್ರಮದಲ್ಲಿ ಕಾಂತಾರ ಪಾರ್ಟ್ 2 ಸಿನಿಮಾಕ್ಕೆ ಬರವಣಿಗೆ ಆರಂಭವಾಗಿದೆ ಎಂದು ತಿಳಿಸಲು ಹರ್ಷವಾಗುತ್ತದೆ. ಪೃಕೃತಿ ಮಾನವ ಸಂಘರ್ಷದ ಕಥೆಯನ್ನು ಮತ್ತೊಂದು ರೂಪದಲ್ಲಿ ಹೊತ್ತು ತರಲಿದ್ದೇವೆ ಎಂದು ತಿಳಿಸಿದೆ.

ಕಾಂತಾರ ಪಾರ್ಟ್ 2 ಸಿನಿಮಾದ ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಆದರೆ ಈ ಚಿತ್ರವನ್ನು ಬರೆದು, ನಟಿಸಿ ನಿರ್ದೇಶಿಸಲಿದ್ದಾರೆ ರಿಷಭ್ ಶೆಟ್ಟಿ.

ಅಷ್ಟೇ ಅಲ್ಲದೇ ನಿರ್ಮಾಪಕರು ಕಾಂತಾರ ಚಿತ್ರವನ್ನು ಇಟಾಲಿಯನ್ ಹಾಗೂ ಸ್ಪ್ಯಾನಿಶ್ ಭಾಷೆಯಲ್ಲಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

ಭಾರತೀಯರೂ ಸೇರಿದಂತೆ ಜಗತ್ತಿನ ಸಿನಿಪ್ರಿಯರ ಮನಗೆದ್ದಿರುವ ನಮ್ಮ ಕಾಣಿಕೆ ಕಾಂತಾರವನ್ನು ಶೀಘ್ರದಲ್ಲೇ ಇಟಾಲಿಯನ್ ಹಾಗೂ ಸ್ಪ್ಯಾನಿಶ್ ಭಾಷೆಯಲ್ಲಿ ಅಲ್ಲಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ದೇಶದಾದ್ಯಂತ 2022ರ ಸೆ.30ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ತೆರೆಕಂಡಿದ್ದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದೆ. ಈ ಚಿತ್ರದಲ್ಲಿ ರಿಷಬ್‌ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ಕೆಜಿಎಫ್‌ –1, ಕೆಜಿಎಫ್‌–2 ನಿರ್ಮಿಸಿರುವ ಹೊಂಬಾಳೆ ಫಿಲಂಸ್‌ ಕಾಂತಾರ ಚಿತ್ರವನ್ನು ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT