ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ದೇಶಕನಾಗಿ 25 ವರ್ಷ: ಕರಣ್‌ ಜೋಹರ್‌ಗೆ ಬ್ರಿಟನ್‌ ಸಂಸತ್‌ನಿಂದ ಗೌರವ

Published : 21 ಜೂನ್ 2023, 6:27 IST
Last Updated : 21 ಜೂನ್ 2023, 6:27 IST
ಫಾಲೋ ಮಾಡಿ
Comments

ಲಂಡನ್‌: ಜಾಗತಿಕ ಮನರಂಜನಾ ಉದ್ದಿಮೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಬಾಲಿವುಡ್‌ ಚಿತ್ರ ನಿರ್ದೇಶಕ ಕರಣ್ ಜೋಹರ್‌ ಅವರನ್ನು ಬ್ರಿಟನ್‌ ಸಂಸತ್ತು ಗೌರವಿಸಿದೆ. ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅವರಿಗೆ ಈ ಗೌರವ ಸಂದಿದೆ.

ಇದನ್ನು ಕರಣ್‌ ಜೋಹರ್‌ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಬ್ಯಾರನೆಸ್ ಸ್ಯಾಂಡಿ ವರ್ಮಾ ಅವರು ಜೋಹರ್‌ ಅವರಿಗೆ ಈ ಗೌರವ ಪ್ರದಾನ ಮಾಡಿದರು.

‘ಇಂದು ನನಗೆ ವಿಶೇಷ ದಿನ. ಲಂಡನ್‌ನಲ್ಲಿರುವ ಬ್ರಿಟಿಷ್ ಹೌಸ್ ಆಫ್ ಪಾರ್ಲಿಮೆಂಟ್‌ನಲ್ಲಿ ಗೌರವಾನ್ವಿತ ಬ್ಯಾರನೆಸ್ ವರ್ಮಾರಿಂದ ಗೌರವಿಸಲ್ಪಟ್ಟಿರುವುದು ನನ್ನ ಅದೃಷ್ಟ. ನಾನು ಅವರಿಗೆ ಕೃತಜ್ಞನಾಗಿದ್ದೇನೆ‘ ಎಂದು ಜೋಹರ್‌ ಬರೆದುಕೊಂಡಿದ್ದಾರೆ.

1998ರಲ್ಲಿ ಕುಚ್‌ ಕುಚ್‌ ಹೋತಾ ಹೈ ಸಿನಿಮಾ ನಿರ್ದೇಶನ ಮಾಡುವ ಮೂಲಕ ಜೋಹರ್‌ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದರು. ಕಭಿ ಖುಷಿ ಕಭಿ ಗಮ್‌, ಕಭಿ ಅಲ್ವಿದಾ ನಾ ಕೆಹನಾ, ಮೈ ನೇಮ್‌ ಈಸ್‌ ಖಾನ್, ಕಲ್‌ ಹೋ ನಾ ಹೋ, ಹೇ ಜವಾನಿ ಹೇ ದಿವಾನಿ, ಕಪೂರ್‌ ಆ್ಯಂಡ್‌ ಸನ್ಸ್‌ ಇವರು ನಿರ್ದೇಶನ ಮಾಡಿರುವ ಪ್ರಮುಖ ಚಿತ್ರಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT