ಕರೀನಾಗೆ ಮತ್ತೆ ‘ಗುಡ್‌ ನ್ಯೂಸ್’!

7

ಕರೀನಾಗೆ ಮತ್ತೆ ‘ಗುಡ್‌ ನ್ಯೂಸ್’!

Published:
Updated:
Prajavani

‌‘ಗುಡ್‌ ನ್ಯೂಸ್‌’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಬಿ ಟೌನ್‌ ನಟಿ ಕರೀನಾ ಕಪೂರ್‌ ಮತ್ತೊಂದು ಗುಡ್‌ ನ್ಯೂಸ್‌ ಕೊಡುತ್ತಾರೆಯೇ? ಕಳೆದ ವರ್ಷದ ಸೂಪರ್‌ ಹಿಟ್‌ ಚಿತ್ರ ‘ಹಿಂದಿ ಮೀಡಿಯಂ’ನ ಎರಡನೇ ಆವೃತ್ತಿ ‘ಹಿಂದಿ ಮೀಡಿಯಂ 2’ನಲ್ಲಿ ಇರ್ಫಾನ್‌ ಖಾನ್‌ಗೆ ಜೋಡಿಯಾಗುವಂತೆ ಕರೀನಾಗೆ ಆಫರ್‌ ಬಂದಿದೆಯಂತೆ.

ಅಕ್ಷಯ್‌ ಕುಮಾರ್‌ ಮತ್ತು ದಿಲ್ಜೀತ್‌ ದೋಸಂಜ್‌ ಮುಖ್ಯ ಭೂಮಿಕೆಯಲ್ಲಿರುವ ‘ಗುಡ್‌ ನ್ಯೂಸ್‌’ ಸೆಟ್‌ನಿಂದ ಕರೀನಾ, ಕರಣ್‌ ಜೋಹರ್‌ ನಿರ್ಮಾಣದ ಅದ್ದೂರಿ ಚಿತ್ರ ‘ತಖ್ತ್‌’ಗೆ ಈಗಾಗಲೇ ಸಹಿ ಹಾಕಿದ್ದಾರೆ. ರಣವೀರ್‌ ಸಿಂಗ್‌, ಜಾಹ್ನವಿ ಕಪೂರ್‌, ವಿಕಿ ಕೌಶಲ್‌, ಅನಿಲ್ ಕಪೂರ್‌, ಅಲಿಯಾ ಭಟ್‌ ಮತ್ತು ಭೂಮಿ ಪೆಡ್ನೇಕರ್‌ ಅವರನ್ನು ಒಳಗೊಂಡ ಚಿತ್ರ ‘ತಖ್ತ್‌’. ಈ ಮಧ್ಯೆ ಇರ್ಫಾನ್‌ ಜೊತೆಗಿನ ಹೊಸ ಚಿತ್ರವನ್ನು ಕರೀನಾ ಒಪ್ಪಿಕೊಳ್ಳುತ್ತಾರಾ ಎಂಬುದು ಮತ್ತೊಂದು ಪ್ರಶ್ನೆ.

‘ಹಿಂದಿ ಮೀಡಿಯಂ 2’ ತಾರಾಗಣದ ಬಗ್ಗೆ ಎರಡು ವರ್ಷಗಳಿಂದಲೂ ಚರ್ಚೆಗಳು ನಡೆಯುತ್ತಲೇ ಇವೆ. ಮೊದಲ ಆವೃತ್ತಿಯಲ್ಲಿ ಇರ್ಫಾನ್ ಖಾನ್‌ಗೆ ಪಾಕಿಸ್ತಾನ ಮೂಲದ ನಟಿ ಸಬಾ ಖಮರ್‌ ನಟಿಸಿದ್ದರು. ದೀಪಕ್‌ ಡೊಬ್ರಿಯಾಲ್‌ ಮತ್ತು ಶಾಯ್ನಾ ಪಟೇಲ್‌ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದರು. ಸಾಕೇತ್ ಚೌಧರಿ ನಿರ್ದೇಶನದ ಮೂಲ ಚಿತ್ರಕ್ಕೆ ಜೀನತ್‌ ಲಖಾನಿ ಚಿತ್ರಕತೆ ಬರೆದಿದ್ದರು.

ಎರಡನೇ ಆವೃತ್ತಿಗೆ ಇರ್ಫಾನ್ ಖಾನ್‌ ಬದಲಿಗೆ ಶಾರುಕ್‌ ಖಾನ್‌ ನಾಯಕನಟನಾಗಿ ಅಭಿನಯಿಸಲಿದ್ದಾರೆ ಎಂದೂ ಹೇಳಲಾಗಿತ್ತು. ‘ಬಾಜೀಗರ್‌’ನಲ್ಲಿ ಮೋಡಿ ಮಾಡಿದ್ದ  ಕಾಜೋಲ್‌ ನಾಯಕನಟಿಯಾಗಿ ಅಭಿನಯಿಸಲು ಒಪ್ಪಿದ್ದಾರೆ ಎಂಬ ಊಹಾಪೋಹಗಳೂ ಬಾಲಿವುಡ್‌ ಗಲ್ಲಿಗಳಲ್ಲಿ ಕೇಳಿಬಂದಿದ್ದವು.

ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿರುವ ಇರ್ಫಾನ್‌ ಅವರೇ ‘ಹಿಂದಿ ಮೀಡಿಯಂ 2’ನಲ್ಲೂ ನಟಿಸುವ ಸುದ್ದಿಯೊಂದಿಗೆ ಕರೀನಾ ಕಪೂರ್‌ ಹೆಸರೂ ಕೇಳಿಬರುತ್ತಿರುವುದು ಕುತೂಹಲಕಾರಿಯಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !