ಗರ್ಭಿಣಿಯರಿಗೆ ಮಾರ್ಗದರ್ಶನ ನೀಡಲಿದ್ದಾರೆ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್
ನವದೆಹಲಿ: ಗರ್ಭಿಣಿಯರು ಅನುಸರಿಸಬೇಕಾದ ಆರೋಗ್ಯಕರ ಕ್ರಮಗಳ ಕುರಿತ ಪುಸ್ತಕದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಪ್ರಕಾಶನ ಸಂಸ್ಥೆ ಜಗ್ಗರ್‌ನಾಟ್ ತಿಳಿಸಿದೆ.
ಈ ಬಗ್ಗೆ ಭಾನುವಾರ ಮಾಹಿತಿ ನೀಡಿರುವ ಅವರು, 'ಗರ್ಭಿಣಿಯರು ಅನುಸರಿಸಬೇಕಾದ ಆರೋಗ್ಯಕರ ಕ್ರಮಗಳ ಬಗೆಗಿನ ಪುಸ್ತಕದಲ್ಲಿ ಕರೀನಾ ಕಪೂರ್ ಅವರು ನೀಡಲಿರುವ ಮಾರ್ಗದರ್ಶನಗಳನ್ನು ದಾಖಲಿಸಲಾಗುತ್ತದೆ. ಪುಸ್ತಕವು ಮುಂದಿನ ವರ್ಷ ಬಿಡುಗಡೆಯಾಗಲಿದೆ' ಎಂದು ತಿಳಿಸಿದ್ದಾರೆ.
ಪುಸ್ತಕಕ್ಕೆ 'ಕರೀನಾ ಕಪೂರ್ ಖಾನ್ಸ್ ಪ್ರೆಗ್ನೆನ್ಸಿ ಬೈಬಲ್' ಎಂದು ಹೆಸರಿಡಲಾಗಿದೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಕರೀನಾ ಕಪೂರ್ ಖಾನ್, 'ಅಮ್ಮನಾಗಲು ಬಯಸುವ ಎಲ್ಲ ಮಹಿಳೆಯರಿಗೂ 'ಕರೀನಾ ಕಪೂರ್ ಖಾನ್ಸ್ ಪ್ರೆಗ್ನೆನ್ಸಿ ಬೈಬಲ್' ಅನ್ನು ಅರ್ಪಿಸುತ್ತಿದ್ದೇನೆ. ಗರ್ಭಿಣಿಯರು ರೂಢಿಸಿಕೊಳ್ಳಬೇಕಾದ ಆಹಾರ ಪದ್ಧತಿ, ಜೀವನ ಕ್ರಮ ಮತ್ತು ವ್ಯಾಯಾಮಗಳ ಬಗ್ಗೆ ಈ ಪುಸ್ತಕದಲ್ಲಿ ಮಾತನಾಡಲಿದ್ದೇನೆ. 2021ರಲ್ಲಿ ಜಗ್ಗರ್‌ನಾಟ್ ಪ್ರಕಾಶನವು ಈ ಪುಸ್ತಕವನ್ನು ಹೊರತರಲಿದೆ' ಎಂದು ಹೇಳಿದ್ದಾರೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.