ಶುಕ್ರವಾರ, ಡಿಸೆಂಬರ್ 13, 2019
26 °C

ಜ್ಯೋತಿಕಾ ತಮ್ಮನ ಪಾತ್ರದಲ್ಲಿ ಕಾರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ತಿ ಮತ್ತು ಆತನ ಅಣ್ಣ ಸೂರ್ಯನ ಹೆಂಡತಿ ಜ್ಯೋತಿಕಾ ಒಟ್ಟಿಗೆ ನಟಿಸಲಿದ್ದಾರೆ. ಜ್ಯೋತಿಕಾ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ನಂತರ ಅಭಿಮಾನಿಗಳು ಸೂರ್ಯ–ಜ್ಯೋತಿಕಾ ಜೋಡಿಯನ್ನು ಮತ್ತೆ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದರು. ಆದರೆ, ಜ್ಯೋತಿಕಾ ತನ್ನ ಮೈದುನ ಕಾರ್ತಿ ಜತೆ ನಟಿಸಲು ಮುಂದಾಗಿದ್ದಾರೆ. ರಿಯಲ್‌ ಲೈಫ್‌ನ ಅತ್ತಿಗೆ, ಮೈದುನ ರೀಲ್ ಲೈಫ್‌ನಲ್ಲಿ ಅಕ್ಕ ಮತ್ತು ತಮ್ಮನಾಗಿ ಮನರಂಜಿಸಲಿದ್ದಾರೆ.

ಜ್ಯೋತಿಕಾ ಸಹೋದರನ ಪಾತ್ರದಲ್ಲಿ ಕಾರ್ತಿ ಕಾಣಿಸಿಕೊಳ್ಳಲಿದ್ದಾರೆ. ಜ್ಯೋತಿಕಾ ಸಹೋದರ ಸೂರಜ್‌ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಬಹುತೇಕ ಭಾರತೀಯ ಭಾಷೆಗಳಿಗೆ ರಿಮೇಕ್‌ ಆದ ದೃಶ್ಯಂ ಚಿತ್ರದ ನಿರ್ದೇಶಕ ಜೀತು ಜೋಸೆಫ್‌ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 

ಈ ಚಿತ್ರವನ್ನು ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಿಸಲು ಎಲ್ಲ ಸಿದ್ಧತೆ ನಡೆಯುತ್ತಿದೆ. ಪ್ರಸ್ತುತ ‘ಕೈದಿ’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕಾರ್ತಿ ಈ ಚಿತ್ರದ ಮೂಲಕ ಮತ್ತೊಂದು ಹಿಟ್‌ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ತೆಲುಗಿನಲ್ಲಿ ಈ ಚಿತ್ರಕ್ಕೆ ‘ತಮ್ಮುಡು’ ಎಂಬ ಶೀರ್ಷಿಕೆ ಇಡಲು ಚಿತ್ರತಂಡ ನಿರ್ಧರಿಸಿರುವುದರಿಂದ ಟಾಲಿವುಡ್‌ನಲ್ಲಿ ಹೊಸ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ: ಜ್ಯೋತಿಕಾ ಮರುಪ್ರವೇಶ

ತೆಲುಗಿನ ಮೆಗಸ್ಟಾರ್ ಚಿರಂಜೀವಿ ಅವರ ವೃತ್ತಿ ಜೀವನಕ್ಕೆ ತಿರುವಕೊಟ್ಟ ‘ಖೈದಿ’ ಚಿತ್ರದ ಶೀರ್ಷಿಕೆಯನ್ನು ಕಾರ್ತಿ ಬಳಸಿಕೊಂಡು ಯಶಸ್ಸು ಗಳಿಸಿದರು. ಇದೇ ರೀತಿ, ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್‌ಗೆ ಅಪಾರ ಜನಪ್ರಿಯತೆ ತಂದುಕೊಟ್ಟ ‘ತಮ್ಮುಡು’ ಚಿತ್ರದ ಶೀರ್ಷಿಕೆಯನ್ನು ಬಳಸಿಕೊಳ್ಳಲು ಚಿತ್ರತಂಡ ನಿರ್ಧರಿಸಿರುವುದು ಜಾಣ್ಮೆಯ ನಡೆ. ಆದರೆ ಅಣ್ಣನ ಚಿತ್ರದ ಹೆಸರಿನ ಮೂಲಕ ದೊರೆತ ಯಶಸ್ಸು ತಮ್ಮನ ಚಿತ್ರದ ಮೂಲಕ ಸಿಗುವುದೇ ಎಂದು ಹಲವರು ಯೋಚಿಸುತ್ತಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು