ಕೃತಿ ಸನೊನ್, ಕಾರ್ತಿಕ್ ಆರ್ಯನ್ 'ಹಗ್' ಮಾಡಿರುವ ವಿಡಿಯೊ ಇಲ್ಲಿದೆ...

ಬಾಲಿವುಡ್ ಖ್ಯಾತ ನಟಿ ಕೃತಿ ಸನೊನ್ ಹಾಗೂ ನಟ ಕಾರ್ತಿಕ್ ಆರ್ಯನ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಇದೀಗ ಅವರು ವಿಮಾನ ನಿಲ್ದಾಣದಲ್ಲಿ ಹಗ್ ಮಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ಮುಂಬೈ ಏರ್ಪೋರ್ಟ್ನಲ್ಲಿ ಇಬ್ಬರು ಪರಸ್ಪರ ಹಗ್ ಮಾಡಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಅಭಿಮಾನಿಯೊಬ್ಬರು ಕೃತಿ ಮತ್ತು ಕಾರ್ತಿಕ್ ಪರಸ್ಪರ ಹಗ್ ಮಾಡಿರುವ ವಿಡಿಯೊ ಹಂಚಿಕೊಂಡಿದ್ದರು. ಇದೇ ವಿಡಿಯೊವನ್ನು ಕಾರ್ತಿಕ್ ಕೂಡ ಶೇರ್ ಮಾಡಿದ್ದಾರೆ.
ಅಭಿಮಾನಿಯೊಬ್ಬರು ಕೆಮಿಸ್ಟ್ರಿ ಚೆನ್ನಾಗಿದೆ ಎಂದು ಕಾಮೆಂಟ್ ಹಾಕಿದರೇ, ಮತ್ತೊಬ್ಬರು ’ಇವರಿಬ್ಬರು ಯಾಕೆ ಒಂದಾಗಬಾರದು’ ಎಂದು ಬರೆದಿದ್ದಾರೆ. ಮತ್ತೆ ಕೆಲವರು ಕೃತಿ, ಕಾರ್ತಿಕ್ ಗುಟ್ಟಾಗಿ ಡೇಟ್ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಾರ್ತಿಕ್ ಹಾಗೂ ಕೃತಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಪೂರಕವಾಗಿ ಅವರು ಸುತ್ತಾಡುವ, ಪಾರ್ಟಿಗಳಲ್ಲಿ ಭಾಗವಹಿಸಿರುವ ವಿಡಿಯೊ, ಫೋಟೊಗಳನ್ನು ಮಾಧ್ಯಮಗಳು ಹಂಚಿಕೊಂಡಿದ್ದವು.
ಆದಾಗ್ಯೂ ಕೃತಿ ಮತ್ತು ಕಾರ್ತಿಕ್ ಈ ಬಗ್ಗೆ ಯಾವುದೇ ಮಾಹಿತಿಯನ್ನು ಎಲ್ಲಿಯೂ ಶೇರ್ ಮಾಡಿಕೊಂಡಿಲ್ಲ. ವರದಿಗಾರರ ಡೇಟಿಂಗ್ ಪ್ರಶ್ನೆ ಬಗ್ಗೆಯೂ ಅವರು ಉತ್ತರ ನೀಡಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.