ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘370’ ಫುಲ್‌ ಡಿಮ್ಯಾಂಡ್

Last Updated 11 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿಯಲ್ಲಿನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬೆನ್ನಲ್ಲೇ ಬಾಲಿವುಡ್‌ ಚಿತ್ರ ನಿರ್ಮಾಪಕರು ‘370’ ಟೈಟಲ್‌ಗಾಗಿ ಮುಗಿಬಿದ್ದಿದ್ದಾರೆ.

‘ಕಾಶ್ಮೀರ್ ಹಮಾರಾ ಹೈ’ ‘ಧಾರಾ 370’ ‘ಆರ್ಟಿಕಲ್‌ 370‘ ‘ಆರ್ಟಿಕಲ್‌ 35ಎ‘ ‘ಕಾಶ್ಮೀರ್‌ ಮೇ ತಿರಂಗಾ’ ...ಇವು ಈಗಾಗಲೇ ನೋಂದಣಿಯಾದ ಸಿನಿಮಾ ಟೈಟಲ್‌ಗಳ ಕೆಲವು ಸ್ಯಾಂಪಲ್‌ ಮಾತ್ರ. ಇದೇ ಟೈಟಲ್‌ ಹೋಲುವ 50 ಶೀರ್ಷಿಕೆ ಒಂದೆರೆಡು ದಿನಗಳಲ್ಲಿಯೇ ನೋಂದಣಿಯಾಗಿವೆ. ಇನ್ನೂ ನೋಂದಣಿಯಾಗುತ್ತಲೇ ಇವೆ. ಕೇವಲ ಸಿನಿಮಾಗಳಿಗೆ ಮಾತ್ರವಲ್ಲ, ಟಿ.ವಿ. ಧಾರಾವಾಹಿಗಳ ನಿರ್ಮಾಪಕರು ಇದೇ ಶೀರ್ಷಿಕೆ ಕೋರಿ ಹೆಸರು ನೋಂದಣಿ ಮಾಡಿಸಿದ್ದಾರೆ. ಇಂಡಿಯನ್‌ ಮೋಷನ್‌ ಪಿಕ್ಚರ್ಸ್‌ ಪ್ರೊಡ್ಯೂಸರ್ಸ್‌ ಅಸೋಸಿಯೇಷನ್‌ (ಐಎಂಪಿಪಿಎ) ಇನ್ನೂ ಟೈಟಲ್‌ಗಳಿಗೆ ಅನುಮತಿ ನೀಡಿಲ್ಲ.

ಪುಲ್ವಾಮಾ ಮತ್ತು ಬಾಲಾಕೋಟ್‌ ದಾಳಿಯ ನಂತರವೂ ಬಾಲಿವುಡ್‌ ಮಂದಿಪುಲ್ವಾಮಾ, ಬಾಲಾಕೋಟ್‌, ಸರ್ಜಿಕಲ್‌ ಸ್ಟ್ರೈಕ್‌, ಅಭಿನಂದನ್‌ ಮುಂತಾದ ಶೀರ್ಷಿಕೆಗಳ ಬೆನ್ನು ಬಿದ್ದಿದ್ದರು. ತರಹೇವಾರಿ ಟೈಟಲ್‌ ನೋಂದಣಿಯಾಗಿವೆ.ಅದ್ಯಾಕೋ ದಕ್ಷಿಣ ಭಾರತದ ಸಿನಿಮಾ ಮಂದಿ ಈ ವಿಷಯದಲ್ಲಿ ಹಿಂದುಳಿದಂತೆ ಕಾಣುತ್ತದೆ.

ಉರಿ ಸರ್ಜಿಕಲ್‌ ಸ್ಟ್ರೈಕ್‌ ನಂತರವೂ ಹಲವು ಟೈಟಲ್‌ ನೋಂದಣಿಯಾಗಿದ್ದವು. ವಿಕ್ಕಿ ಕೌಶಲ್‌ ಅಭಿನಯದ ‘ಉರಿ– ದಿ ಸರ್ಜಿಕಲ್‌ ಸ್ಟ್ರೈಕ್‌’ ಭಾರಿ ಹೆಸರು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT