ಶನಿವಾರ, ಡಿಸೆಂಬರ್ 4, 2021
26 °C

‘ಕಟ್ಟೆ’ ಒಟಿಟಿ ವೇದಿಕೆಯಲ್ಲಿ ‘ನಮ್ಮ ಊರಿನ ರಸಿಕರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡ ರಾಜ್ಯೋತ್ಸವದಂದೇ (ನ. 1ರಂದು) ಆರಂಭವಾಗಲಿರುವ ‘ಕಟ್ಟೆ’ ಒಟಿಟಿ ವೇದಿಕೆಯಲ್ಲಿ ಖ್ಯಾತ ಲೇಖಕ ಗೋರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಕಥಾಸಂಕಲನ ‘ನಮ್ಮ ಊರಿನ ರಸಿಕರು’ ವೆಬ್‌ ಸರಣಿಯಾಗಿ 8 ಕಂತುಗಳಲ್ಲಿ ಪ್ರಸಾರವಾಗಲಿದೆ. 

ಕನ್ನಡದ ಖ್ಯಾತ ನಟ ದಿವಂಗತ ನರಸಿಂಹರಾಜು ಅವರ ಮೊಮ್ಮಕಳಾದ ಅರವಿಂದ್ ಹಾಗೂ ಅವಿನಾಶ್ ಅವರು ಕಟ್ಟೆ ಒಟಿಟಿಯ ಪ್ರವರ್ತಕರು. ಕರ್ನಾಟಕದ ಎಲ್ಲಾ ಪ್ರಾಂತ್ಯದ, ಉಪ ಭಾಷೆಗಳ ಕಾರ್ಯಕ್ರಮಗಳು ಇಲ್ಲಿ ಪ್ರಸಾರವಾಗಲಿವೆ.

ಕ್ಯಾರಂಬೋಲ, ಮ್ಯಾಂಗೋ ಹೌಸ್ ಮತ್ತು ಕಟ್ಟೆ  ಸೇರಿ ‘ನಮ್ಮ ಊರಿನ ರಸಿಕರು’ ವೆಬ್ ಸರಣಿಯನ್ನು ನಿರ್ಮಿಸಿವೆ. ನಂದಿತಾ ಯಾದವ್ ಅವರು ಇದರ ನಿರ್ದೇಶಕಿ.

ಈ  ಸರಣಿಯ ಮುಖ್ಯ ಭೂಮಿಕೆಯಲ್ಲಿ ರಾಜೇಶ್ ನಟರಂಗ, ಲಕ್ಷ್ಮೀ ಗೋಪಾಲಸ್ವಾಮಿ, ಪಿ.ಶೇಷಾದ್ರಿ, ಮಂಡ್ಯ ರಮೇಶ್, ಬಿ.ಸುರೇಶ, ರಮೇಶ್ ಪಂಡಿತ್, ಸುನೇತ್ರ ಪಂಡಿತ್, ಸುಂದರ್, ಶಶಿಕುಮಾರ್, ರವಿ ಕುಮಾರ್, ಮಂಗಳ ಎನ್, ಶೃಂಗಾ ಬಿವಿ, ಸುಜಯ್ ಶಾಸ್ತ್ರೀ, ಅಂಜನ್ ಮತ್ತಿತರರು ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು