ಶನಿವಾರ, ಮೇ 8, 2021
18 °C

‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಕೀರ್ತಿ ನಾಯಕಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಕೀರ್ತಿ ಸುರೇಶ್‌

‘ಭರತ್‌ ಅನೆ ನೇನು’, ‘ಮಹರ್ಷಿ’, ‘ಸರಿಲೇರು ನಿಕೇವ್ವರು’ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ಮಹೇಶ್‌ ಬಾಬು ಮುಂದಿನ ಚಿತ್ರ ‘ಸರ್ಕಾರು ವಾರಿ ಪಾಟ’. ಇತ್ತೀಚೆಗಷ್ಟೇ ಈ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿತ್ತು. ಲಾಕ್‌ಡೌನ್‌ಗೂ ಮೊದಲು ನಾಯಕಿಯರ ಹುಡುಕಾಟದಲ್ಲಿತ್ತು ಚಿತ್ರತಂಡ. 

ಈ ನಡುವೆ ಭರತ್‌ ಅನೆ ನೇನು ಸಿನಿಮಾದಲ್ಲಿ ಮಹೇಶ್‌ಗೆ ಜೋಡಿಯಾಗಿರುವ ಕಿಯಾರ ಅಡ್ವಾನಿ ಇದರಲ್ಲೂ ತೆರೆ ಹಂಚಿಕೊಳ್ಳುವುದು ಪಕ್ಕಾ ಆಗಿತ್ತು. ಜೊತೆಗೆ ಸಾರಾ ಅಲಿ ಖಾನ್‌ ಹೆಸರು ಕೂಡ ಕೇಳಿಬಂದಿತ್ತು. ಆದರೆ ಮೂಲಗಳ ಪ್ರಕಾರ ಕೀರ್ತಿ ಸುರೇಶ್‌ ಸರ್ಕಾರು ವಾರಿ ಪಾಟದಲ್ಲಿ ಮಹೇಶ್‌ ಜೊತೆ ಡ್ಯುಯೆಟ್ ಹಾಡಲಿದ್ದಾರಂತೆ.

ತಮ್ಮ ಜೊತೆ ಕೀರ್ತಿ ಅಭಿನಯಿಸುವುದಕ್ಕೆ ಮಹೇಶ್‌ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಆದರೆ ನಿರ್ಮಾಪಕ ತಂಡ ಆಕೆಯಿಂದ ಇನ್ನೂ ಸಹಿ ಪಡೆದಿಲ್ಲವಂತೆ. ‘ಗೀತಾ ಗೋವಿಂದಂ’ ಖ್ಯಾತಿಯ ನಿರ್ದೇಶಕ ಪರಶುರಾಮ್‌ ಬಾಲಿವುಡ್‌ ನಾಯಕಿಯರನ್ನು ತರುವುದು ಅನುಮಾನ ಎಂಬ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಅದಕ್ಕೆ ಸರಿಯಾಗಿ ಈಗ ಕೀರ್ತಿ ಸುರೇಶ್ ಆಯ್ಕೆಯಾಗಿದ್ದಾರೆ. 

ಈ ನಿರ್ದೇಶಕ ದಕ್ಷಿಣ ಭಾರತದ ನಟಿಯರಾದ ನಯನತಾರ, ಕಾಜಲ್‌ ಅಗರ್‌ವಾಲ್‌, ಲಾವಣ್ಯ ತ್ರಿಪಾಟಿ ಹಾಗೂ ರಶ್ಮಿಕಾ ಮಂದಣ್ಣ ಜೊತೆ ಕೆಲಸ ಮಾಡಿದ್ದಾರೆ.

ಮೊದಲಿನಿಂದಲೂ ಕೀರ್ತಿ ಸುರೇಶ್‌ ಪರಶುರಾಮ್ ಅವರ ಆಯ್ಕೆಯಾಗಿದ್ದರು, ಆದರೆ ಮಹೇಶ್‌ ಬಾಬು ಹಾಗೂ ನಿರ್ಮಾಣ ತಂಡ ಕಿಯಾರ ಅಥವಾ ಸಾರಾ ಅವರನ್ನು ಕರೆ ತರುವ ಯೋಚನೆ ಮಾಡಿದ್ದರು. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಅವರ ಯೋಚನೆಗಳು ಹಳ್ಳ ಹಿಡಿದಿದ್ದವು.

ಕೀರ್ತಿ ಸುರೇಶ್ ಕೈಯಲ್ಲಿ ಈಗಾಗಲೇ ಅನೇಕ ಚಿತ್ರಗಳಿದ್ದು ಈ ಚಿತ್ರಕ್ಕೆ ತಮ್ಮ ಉಪಸ್ಥಿತಿ ಬಯಸಿದಾಗೆಲ್ಲಾ ಬರಲು ಕೀರ್ತಿ ಒಪ್ಪಿಗೆ ಸೂಚಿಸಿದ್ದಾರಂತೆ. ರೋಮ್ಯಾಂಟಿಕ್ ಹಾಸ್ಯಮಯ ಸರ್ಕಾರು ವಾರಿ ಪಾಟ ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು