ಶನಿವಾರ, ಅಕ್ಟೋಬರ್ 24, 2020
27 °C

ಮಲ್ಪೆಯಲ್ಲಿ ಕೆಜಿಎಫ್‌–2 ಚಿತ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮಲ್ಪೆ ಬೀಚ್‌, ಬಂದರು, ಪಡುಕೆರೆ ಕಡಲ ತೀರದಲ್ಲಿ ಕೆಜಿಎಫ್‌–2 ಸಿನಿಮಾದ ಚಿತ್ರೀಕರಣ ಗುರುವಾರ ನಡೆಯಿತು. ಚಿತ್ರದ ನಾಯಕ ಯಶ್‌ ಹಾಗೂ ನಾಯಕಿ ಶ್ರೀನಿಧಿ ಶೆಟ್ಟಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು.

ಮಲ್ಪೆ ಬೀಚ್‌ ಹಾಗೂ ಪ‍ಡುಕೆರೆ ತೀರದಲ್ಲಿ ಸೆಟ್‌ಗಳನ್ನು ಹಾಕಲಾಗಿದ್ದು, 2 ದಿನ ಚಿತ್ರೀಕರಣ ನಡೆಯಲಿದೆ. ಶೂಟಿಂಗ್ ಸುದ್ದಿ ತಿಳಿದು ನೂರಾರು ಸಾರ್ವಜನಿಕರು ಹಾಗೂ ಪ್ರವಾಸಿಗರು ಚಿತ್ರೀಕರಣ ನಡೆಯುತ್ತಿದ್ದ ಸ್ಥಳದತ್ತ ತೆರಳಲು ಪ್ರಯತ್ನಿಸಿದರು. ಆದರೆ, ಬೌನ್ಸರ್‌ಗಳು ಅವಕಾಶ ನೀಡಲಿಲ್ಲ. ಫೋಟೊಗಳನ್ನು ತೆಗೆಯಲು ಬಿಡಲಿಲ್ಲ. ಅಭಿಮಾನಿಗಳು ದೂರದಲ್ಲಿ ನಿಂತು ಚಿತ್ರೀಕರಣ ವೀಕ್ಷಿಸಿದರು.

ಐದಾರು ಸ್ಕಾರ್ಪಿಯೋ ವಾಹನಗಳು ಸಮುದ್ರ ತೀರದಲ್ಲಿ ಸುತ್ತುವರಿಯುವ ದೃಶ್ಯವನ್ನು ಸೆರೆ ಹಿಡಿಯಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು