ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಟಿಪ್ಲೆಕ್ಸ್‌ಗಳ ಇತಿಹಾಸದಲ್ಲೇ ಹೆಚ್ಚು ಗಳಿಕೆ ಮಾಡಿ ಕೊಟ್ಟ ಚಿತ್ರ ಕೆಜಿಎಫ್-2

Last Updated 27 ಜುಲೈ 2022, 12:54 IST
ಅಕ್ಷರ ಗಾತ್ರ

ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ಚಿತ್ರ ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ಮುರಿದಿದೆ. ಸಿಂಗಲ್‌ ಸ್ಕ್ರೀನ್‌ ಮಾತ್ರವಲ್ಲದೇ ಮಲ್ಟಿಪ್ಲೆಕ್ಸ್‌ಗಳಲ್ಲೂ ದಾಖಲೆ ಮಾಡಿದೆ.

ಮಲ್ಟಿಪ್ಲೆಕ್ಸ್‌ನ ಪಿ.ವಿ.ಆರ್‌. ಸಿನಿಮಾಸ್‌ಗಳಲ್ಲಿ ಈ ಚಿತ್ರ ದಾಖಲೆಯ ₹ 121.4 ಕೋಟಿ ಗಳಿಗೆ ಮಾಡಿದೆ ಎಂದು ತೆಲುಗಿನ ಆಂಧ್ರ ಬಾಕ್ಸ್‌ಆಫೀಸ್‌ ಟ್ವೀಟ್‌ ಮಾಡಿದೆ. ಇದು ಮಲ್ಟಿಪ್ಲೆಕ್ಸ್‌ ಇತಿಹಾಸದಲ್ಲೇ ದಾಖಲೆಯ ಗಳಿಕೆಯಾಗಿದೆ.

ದೇಶದಾದ್ಯಂತ 173 ಪಿವಿಆರ್‌ ಸಿನಿಮಾ ಮಂದಿರಗಳಲ್ಲಿ ಈ ದಾಖಲೆ ಮಾಡಿದೆ. 2022ರಲ್ಲಿ ಪಿವಿಆರ್‌ ಚಿತ್ರಮಂದಿರಗಳಲ್ಲಿ ಆರ್‌ಆರ್‌ಆರ್‌ ಸಿನಿಮಾ₹93.7 ಕೋಟಿ,ಭೂಲ್‌ಭೂಲಿಯಾ₹47.4 ಕೋಟಿ,ಡಾಕ್ಟರ್‌ ಸ್ಟ್ರೇಂಜ್‌–2₹45.8 ಕೋಟಿ ಹಾಗೂ ವಿಕ್ರಮ್‌ ಸಿನಿಮಾ₹26.6 ಕೋಟಿ ಗಳಿಕೆ ಕಂಡಿದೆ.

ಚಿತ್ರ ಬಿಡುಗಡೆಯಾಗಿ 20 ದಿನಗಳಲ್ಲಿ ₹1000 ಕೋಟಿ ಕ್ಲಬ್‌ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೊಸ ದಾಖಲೆ ಕೂಡ ಮಾಡಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT