‘ರೂಪಾಯಿ’ಗೆ ಖಾರಾಬಾತ್

‘ಖಾರಾಬಾತ್...’ ಈ ಸಾಲನ್ನೊಳಗೊಂಡ ಹಾಡು ‘ರೂಪಾಯಿ’ ಚಿತ್ರ ಸೇರಿದೆ. ಈಗ ‘ರೂಪಾಯಿ’ಗೆ ಖಾರಾಬಾತ್ ಅನ್ನುವುದು ಸಿನಿಮಂದಿಯ ಮಾತು. ಚಿತ್ರದ ನಿರ್ದೇಶಕ, ನಾಯಕ ವಿಜಯ್ ಜಗದಾಲೆ ಬರೆದ ಹಾಡಿಗೆ ಸುಪ್ರಿಯಾ ರಾಮ್ ದನಿಯಾಗಿದ್ದಾರೆ. ಆನಂದ್ ವಿಕ್ರಮ್‌ರಾಜ್ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋದ ಯುಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ.
ಕೃಷಿ ತಾಪಂಡ, ಚಂದನಾ ರಾಘವೇಂದ್ರ, ಮೈತ್ರಿ ಜಗದೀಶ್, ರಾಮ್ ಚಂದನ್, ಪ್ರಮೋದ್ ಶೆಟ್ಟಿ, ಅನಿಲ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರನ್ನು ಡಾಲಿ ಧನಂಜಯ ಬಿಡುಗಡೆ ಮಾಡಿದ್ದರು.
ಚಿತ್ರದಲ್ಲೇನಿರಬಹುದು?: ‘ರೂಪಾಯಿ’ ಮಹತ್ವ ಸಾರುವ ಈ ಚಿತ್ರದಲ್ಲಿ, ಕಾಮಿಡಿ, ಸೆಂಟಿಮೆಂಟ್... ಹೀಗೆ ಎಲ್ಲಾ ಅಂಶಗಳು ಇವೆ. ಫೆ. 1ರಂದು ಟ್ರೇಲರ್ ಬಿಡುಗಡೆ ಆಗಲಿದೆ. ಫೆಬ್ರವರಿ 10ರಂದು ಚಿತ್ರ ತೆರೆಗೆ ಬರಲಿದೆ ಎಂಬುದು ಚಿತ್ರತಂಡದ ಮಾಹಿತಿ.
ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ., ಹರೀಶ್ ಬಿ.ಕೆ. ಮತ್ತು ವಿನೋದ್ ಎನ್. ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆರ್.ಡಿ. ನಾಗಾರ್ಜುನ ಛಾಯಾಗ್ರಹಣ ಹಾಗೂ ಶಿವರಾಜ್ ಮೇಹು ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸುನಿವಿನಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.