ಬುಧವಾರ, ಆಗಸ್ಟ್ 10, 2022
20 °C

ಪ್ರವಾಸದ ಚಿತ್ರ ಪೋಸ್ಟ್ ಮಾಡಿ ನೆನಪು ಹಂಚಿಕೊಂಡ ಜಾಹ್ನವಿ ಮತ್ತು ಖುಷಿ ಕಪೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Kushi Kapoor Instagram Post

ಬೆಂಗಳೂರು: ಬಾಲಿವುಡ್‌ನ ಕಪೂರ್ ಕುಟುಂಬದ ಕುಡಿಗಳಾದ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ.

ಹೊರಗಡೆ ಸುತ್ತಾಡಲು ಹೋಗುವ ವೇಳೆಯಲ್ಲಿ ಇಬ್ಬರೂ ಜತೆಯಾಗಿ ತೆರಳುವುದು ಕೂಡ ಆಗಾಗ ಕ್ಯಾಮರಾ ಕಣ್ಣಿಗೆ ಬೀಳುತ್ತದೆ.

ಜಾಹ್ನವಿ ಜತೆಗಿನ ಫೋಟೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಖುಷಿ ಕಪೂರ್, ಲವ್ ಯೂ ಸಮ್‌ಟೈಮ್ಸ್.. ಎಂದು ಅಡಿಬರಹ ನೀಡಿದ್ದಾರೆ.

ಹಿನ್ನೆಲೆಯಲ್ಲಿ ಸೂರ್ಯಾಸ್ತದ ಚಿತ್ರಣವಿರುವ ಖುಷಿ ಕಪೂರ್ ಮತ್ತು ಜಾಹ್ನವಿ ಕಪೂರ್ ಫೋಟೊಗೆ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ಖುಷಿ ಕಪೂರ್, ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಓದುತ್ತಿದ್ದು, ಮುಂದೆ ಚಿತ್ರರಂಗ ಪ್ರವೇಶಿಸುವ ಆಸಕ್ತಿ ಹೊಂದಿದ್ದಾರೆ.

ಜಾಹ್ನವಿ ಕೂಡ ಖುಷಿಯ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಸಹೋದರಿಯ ಕಾಲೆಳೆಯಲು ಯತ್ನಿಸುತ್ತಿರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು