'ಕಬ್ಜಾ' ಪೋಸ್ಟರ್ ಬಿಡುಗಡೆ: ಉಪೇಂದ್ರ, ಕಿಚ್ಚ ಸುದೀಪ ಅಭಿಮಾನಿಗಳು ಥ್ರಿಲ್
ಬೆಂಗಳೂರು: ಮುಖ್ಯಪಾತ್ರದಲ್ಲಿ ಉಪೇಂದ್ರ ಮತ್ತು ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ ನಟಿಸುತ್ತಿರುವ 'ಕಬ್ಜಾ' ಸಿನಿಮಾದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.
ಜೂನ್ 27ರಂದು ಬಿಡುಗಡೆಗೊಂಡಿರುವ ಪೋಸ್ಟರ್‌ನಲ್ಲಿ ಭೂಗತ ಲೋಕದ ಕರಾಳತೆ ಪ್ರತಿಬಿಂಬವಾಗಿದ್ದು, ಉಪೇಂದ್ರ ಮತ್ತು ಸುದೀಪ್ ಅವರ ಸ್ಕೆಚ್ ಇದೆ.
'ಐ ಲವ್ ಯು' ಬಳಿಕ ಉಪೇಂದ್ರ ಮತ್ತು ನಿರ್ದೇಶಕ ಆರ್ ಚಂದ್ರು ಅವರ ಸಹಯೋಗದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿದೆ. 1940 ಮತ್ತು 1980ರ ನಡುವಿನ ಪಾತಕಲೋಕದ ಕಥೆಹಂದರವು ಚಿತ್ರದಲ್ಲಿದೆ. ಜಗಪತಿ ಬಾಬು, ಕಬೀರ್ ದುಹಾನ್ ಸಿಂಗ್, ಪ್ರಮೋದ್ ಶೆಟ್ಟಿ. ಅನೂಪ್ ರೇವಣ್ಣ. ಕಾಮರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಕೊನೆಗೂ ತಮ್ಮ ನ್ಯೂಯಾರ್ಕ್ನ ರೆಸ್ಟೂರೆಂಟ್ಗೆ ಭೇಟಿ ನೀಡಿದರು!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.