ಕಿರುತೆರೆ ನಟ ಚಂದನ್ ಕುಮಾರ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಫ್ಲರ್ಟ್’ ಚಿತ್ರದ ‘ನೀ ನನ್ನ ಜೀವ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಸ್ನೇಹದ ಕುರಿತಾದ ಈ ಗೀತೆಗೆ ನಟ ಸುದೀಪ್ ಧ್ವನಿಯಾಗಿದ್ದಾರೆ.

ಹುಡುಗಿಯರನ್ನು ಚುಡಾಯಿಸಿಕೊಂಡು ಓಡಾಡುವ ಹುಡುಗನ ಕಥೆ ಹೊಂದಿರುವ ಚಿತ್ರವಿದು. ಎವರೆಸ್ಟ್ ಪಿಕ್ಚರ್ಸ್ ಬ್ಯಾನರ್ ಅಡಿ ಚಂದನ್ ಅವರ ಪತ್ನಿ ಕವಿತಾಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.

‘ಇದೊಂದು ರಾಂಕಾಮ್ ಸಿನಿಮಾ. ಸ್ನೇಹ, ಪ್ರೀತಿ ಸೇರಿದಂತೆ ಎಲ್ಲಾ ರೀತಿಯ ಮನರಂಜನೀಯ ಅಂಶಗಳನ್ನು ಒಳಗೊಂಡಿದೆ. ಫ್ಲರ್ಟ್ ಎಂದರೆ ಕೇವಲ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ. ಈ ಚಿತ್ರದಲ್ಲಿ ರಾಂಕಾಮ್ ಜತೆಗೆ ಸೈಕೋ ಕ್ಯಾರೆಕ್ಟರ್ ಕೂಡ ಇದೆ. ಇಡೀ ಚಿತ್ರ ಎಲ್ಲೂ ಬೋರಾಗದಂತೆ ವೇಗವಾಗಿ ಸಾಗುತ್ತದೆ’ ಎಂದರು ಚಂದನ್.

ಅಕ್ಷತಾ ಬೋಪಣ್ಣ ಹಾಗೂ ನಿಮಿಕಾ ರತ್ನಾಕರ್ ನಾಯಕಿಯರು. ಶ್ರುತಿ, ಸಾಧು ಕೋಕಿಲ, ಗಿರಿ, ಮೂಗು ಸುರೇಶ್ ಮುಂತಾದವರು ಚಿತ್ರದಲ್ಲಿದ್ದಾರೆ. ಈ ಗೀತೆಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ, ವೇಣುಗೋಪಾಲ್ ಎಚ್.ಸಿ ಛಾಯಾಚಿತ್ರಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.