ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಮಾರ್ಕ್’ ಟ್ರೇಲರ್ ಬಿಡುಗಡೆಯಾಗಿದೆ.

ಸರಿಗಮ ಯೂಟ್ಯೂಬ್ ಚಾನೆಲ್ನಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಇದು ಅವರ 47ನೇ ಸಿನಿಮಾವಾಗಿದೆ.

ಮಕ್ಕಳ ಕಳ್ಳಸಾಗಾಣಿಕೆ ಜಾಲವನ್ನು ಭೇದಿಸುವ ಪೊಲೀಸ್ ಅಧಿಕಾರಿಯಾಗಿ ಅಜಯ್ ಮಾರ್ಕಾಂಡೇಯ ಉರ್ಫ್ ಮಾರ್ಕ್ ಆಗಿ ಸುದೀಪ್ ಪಾತ್ರ ನಿರ್ವಹಿಸಿದ್ದು, ಟ್ರೇಲರ್ ನೋಡಿದರೆ ಇದೊಂದು ಆ್ಯಕ್ಷನ್ ಪ್ಯಾಕ್ ಸಿನಿಮಾ ಎನ್ನುವುದು ಖಚಿತವಾಗುತ್ತದೆ.

ಟ್ರೇಲರ್ನಲ್ಲಿ ಆ್ಯಕ್ಷನ್ ದೃಶ್ಯಗಳು ಹಾಗೂ ಹಿನ್ನಲೆ ಸಂಗೀತವು ಗಮನ ಸೆಳೆಯುತ್ತದೆ.

ಸುದೀಪ್ ಅವರು ತಮ್ಮ ಹಿಂದಿನ ಸಿನಿಮಾ ಮ್ಯಾಕ್ಸ್ ಅಲ್ಲಿಯೂ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದರು.

ಮಾರ್ಕ್ ಸಿನಿಮಾವನ್ನು ಸತ್ಯಜ್ಯೋತಿ ಫಿಲ್ಮ್ ನಿರ್ಮಾಣ ಮಾಡುತ್ತಿದೆ. ಮ್ಯಾಕ್ಸ್ ಸಿನಿಮಾವನ್ನು ನಿರ್ದೇಶಿಸಿದ್ದ ತಮಿಳಿನ ವಿಜಯ್ ಕಾರ್ತಿಕೇಯ ಅವರೇ ಈ ಸಿನಿಮಾಗೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತವಿದ್ದು, ಡಿ.25ರಂದು ಸಿನಿಮಾವು ತೆರೆಕಾಣಲಿದೆ.
.‘ಮಾರ್ಕ್’ ಸಿನಿಮಾದ ಚಿತ್ರೀಕರಣ ಮುಕ್ತಾಯ: ನಟ ಸುದೀಪ್ ಹೇಳಿದ್ದೇನು?.ಸಿನಿ ಸುದ್ದಿ: ‘ಮಾರ್ಕ್’ನಲ್ಲಿ ಸುದೀಪ್ ಮಿಂಚು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.