ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಜುನ್‌ಗೌಡ’ನ ಕಿಕ್‌ ಬಾಕ್ಸಿಂಗ್‌ ಮೋಡಿ

Last Updated 6 ಮಾರ್ಚ್ 2020, 19:30 IST
ಅಕ್ಷರ ಗಾತ್ರ

‘ಜಂಟಲ್‌ಮನ್‌’ ಚಿತ್ರದಲ್ಲಿನ ವಿಭಿನ್ನ ಪಾತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಬೆನ್ನಲ್ಲೇ ನಟ ಪ್ರಜ್ವಲ್‌ ದೇವರಾಜ್‌ ‘ಅರ್ಜುನ್‌ಗೌಡ’ ಸಿನಿಮಾದ ಶೂಟಿಂಗ್‌ ಕೂಡ ಪೂರ್ಣಗೊಳಿಸಿದ್ದಾರೆ. ಇದರಲ್ಲಿ ಅವರು ಸಂಕೀರ್ಣ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ರೊಮ್ಯಾಂಟಿಕ್‌ ಆ್ಯಕ್ಷನ್‌ ಚಿತ್ರ ಇದು. ಮೂರು ಗೆಟಪ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಅವರು ಕಿಕ್‌ ಬಾಕ್ಸಿಂಗ್‌ ಕೂಡ ಕಲಿತಿದ್ದು ವಿಶೇಷ.

ಒಟ್ಟು 80 ದಿನಗಳ ಕಾಲ ಶೂಟಿಂಗ್‌ ನಡೆಸಲಾಗಿದೆ. ಡಬ್ಬಿಂಗ್ ಕೂಡ ಪೂರ್ಣವಾಗಿದ್ದು, ಏಪ್ರಿಲ್‍ನಲ್ಲಿ ಥಿಯೇಟರ್‌ಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಸಾಮಾನ್ಯ ಮನುಷ್ಯನೊಬ್ಬ ನಾರ್ಮಲ್ ಆಗಿರದೇ ಬೇರೆ ಮಾದರಿಯಲ್ಲಿರಬೇಕು ಎಂಬುದೇ ಈ ಚಿತ್ರದ ಕಥಾಹಂದರ.

ಪ್ರಿಯಾಂಕಾ ತಿಮ್ಮೇಶ್‌ ಈ ಚಿತ್ರದ ನಾಯಕಿ. ಬೋಲ್ಡ್‌ ಆಗಿರುವ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ರಾಘವೇಂದ್ರ ಕಾಮತ್, ಶಂಕರ್ ಬರೆದಿರುವ ನಾಲ್ಕು ಗೀತೆಗಳಿಗೆ ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈಆನಂದ್ ಅವರ ಛಾಯಾಗ್ರಹಣವಿದೆ. ಇದಕ್ಕೆ ನಿರ್ಮಾಪಕ ರಾಮು ಬಂಡವಾಳ ಹೂಡಿದ್ದಾರೆ.

ಅರ್ಜುನ್ ಕಿಟ್ಟು ಸಂಕಲನ ನಿರ್ವಹಿಸಿದ್ದಾರೆ. ಮೋಹನ್, ರಾಜು ನೃತ್ಯ ನಿರ್ದೇಶಿಸಿದ್ದಾರೆ. ಈಶ್ವರಿ ಕುಮಾರ್, ರತನ್ ಅವರ ಕಲಾ ನಿರ್ದೇಶನವಿದೆ. ಮಾಸ್ ಮಾದ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ.

ಸಾಧುಕೋಕಿಲ, ರಾಹುಲ್ ದೇವ್, ‘ಸ್ಪರ್ಶ’ ಖ್ಯಾತಿಯ ರೇಖಾ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನಾ ಶ್ರೀನಿಧಿ, ‘ಭಜರಂಗಿ’ ಚೇತನ್, ಜೀವ, ಸೂರಜ್, ದಿನೇಶ್ ಮಂಗಳೂರು, ಹನುಮಂತೇಗೌಡ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT