ಬುಧವಾರ, ಆಗಸ್ಟ್ 4, 2021
22 °C

ಚಿತ್ರಗಳು ಹೇಳುತ್ತಿವೆಯೇ? ಕಿಮ್‌ ಶರ್ಮಾ–ಲಿಯಾಂಡರ್‌ ಪೇಸ್‌ ಡೇಟಿಂಗ್‌ ಕಥೆಯ!

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಭಾರತದ ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌, ನಟಿ ಕಿಮ್‌ ಶರ್ಮಾ ಅವರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿದೆ.

ಸದ್ಯ ಈ ಜೋಡಿ ಗೋವಾದ ಬೀಚ್‌ನಲ್ಲಿ ಕಾಲ ಕಳೆಯುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅವರು ಉಳಿದುಕೊಂಡಿರುವ ‘ಪೌಸಾದ‘ ರೆಸ್ಟೋರೆಂಟ್‌ ಕೆಲವು ಫೋಟೊಗಳನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.

ಊಟದ ಟೇಬಲ್‌ ಬಳಿ ಒಟ್ಟಿಗೆ ಕುಳಿತಿರುವ ಒಂದು ಚಿತ್ರ ಹಾಗೂ ರೆಸ್ಟೋರೆಂಟಿನ ಶ್ವಾನಗಳ ಜತೆಯಲ್ಲಿ ಕಾಲ ಕಳೆಯುತ್ತಿರುವ ಮತ್ತೊಂದು ಚಿತ್ರವನ್ನು ಪೋಸ್ಟ್‌ ಮಾಡಲಾಗಿದೆ. ಆದಾಗ್ಯೂ ಆ ಚಿತ್ರಗಳನ್ನು ಕಿಮ್‌–ಪೇಸ್‌ ಜೋಡಿ ಹಂಚಿಕೊಂಡಿಲ್ಲ! ಬದಲಿಗೆ ಪೌಸಾದ ರೆಸ್ಟೋರೆಂಟ್‌ ಪ್ರಕಟಿಸಿದೆ. ಈ ರೆಸ್ಟೋರೆಂಟ್‌ ಗ್ರಾಹಕರು ಹಾಗೂ ಸೆಲೆಬ್ರಿಟಿಗಳ ಅನುಮತಿ ಪಡೆದು ಅವರ ಚಿತ್ರಗಳನ್ನು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತದೆ.

ಕಿಮ್‌ ಮತ್ತು ಪೇಸ್‌ ಜೋಡಿ ಮುಂಬೈನಲ್ಲಿ ಒಟ್ಟಿಗೆ ಇದ್ದಾರೆ ಎಂಬ ಮಾತುಗಳು ಈ ಹಿಂದೆ ಕೇಳಿಬಂದಿದ್ದವು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳು ಹರಿದಾಡುತ್ತಿರುವುದನ್ನು ನೋಡಿದರೆ ಇಬ್ಬರು ಡೇಟಿಂಗ್‌ನಲ್ಲಿ ಇರುವುದು ಸ್ಪಷ್ಟವಾದಂತಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಲಿಯಾಂಡರ್‌ ಪೇಸ್‌ ಅವರು 2000ನೇ ವರ್ಷದಿಂದಲೂ ರೂಪದರ್ಶಿ ರಿಯಾ ಪಿಳೈ ಅವರೊಂದಿಗೆ ಸಹ ಜೀವನ ನಡೆಸುತ್ತಿದ್ದಾರೆ. 2005ರಲ್ಲಿ ರಿಯಾಗೆ ಹೆಣ್ಣುಮಗು ಜನಿಸಿತ್ತು.

ಇನ್ನು ಕಿಮ್‌ ಶರ್ಮಾ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಹಾಗೂ  ಜೊತೆ ಡೇಟಿಂಗ್‌ನಲ್ಲಿ ಇದ್ದರು. ಯುವಿ ಜೊತೆ ಬ್ರೇಕ್‌ಅಪ್‌ ಆದ ಬಳಿಕ ಬಾಲಿವುಡ್‌ ನಟ ಹರ್ಷವರ್ಧನ್‌ ರಾಣೆ ಅವರೊಂದಿಗೆ ಡೇಟಿಂಗ್‌ನಲ್ಲಿದ್ದರು. 

ಆದಾಗ್ಯೂ ಈ ಜೋಡಿ ನಾವು ಡೇಟಿಂಗ್‌ನಲ್ಲಿ ಇದ್ದೇವೆ ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು