ಲೂಸ್ ಮಾದ ಯೋಗಿ ಅವರ 50ನೇ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಅನಾವರಣಗೊಂಡಿದೆ. ಚಿತ್ರಕ್ಕೆ ‘ಕಿಂಗ್’ ಎಂದು ಹೆಸರಿಡಲಾಗಿದ್ದು, ನಟ ಶಿವರಾಜ್ಕುಮಾರ್ ಶೀರ್ಷಿಕೆ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಚಿತ್ರಕ್ಕೆ ಜಾಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಂತೋಷ್ ಬಸವರಾಜ್ ಮತ್ತು ಗೆಳೆಯರು ಬಂಡವಾಳ ಹೂಡುತ್ತಿದ್ದಾರೆ.

‘ಯೋಗಿಯನ್ನು ಚಿಕ್ಕವರಿದ್ದಾಗಿನಿಂದ ನೋಡಿಕೊಂಡು ಬಂದಿದ್ದೇನೆ. ‘ಜೋಗಿ’ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದ ಇವರು ಇವತ್ತು ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ನನ್ನ ಜತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ‘ಬೇಲ್’ ಸಿನಿಮಾದಲ್ಲಿಯೂ ನನ್ನ ಎದುರು ಖಳನಾಯಕನಾಗಿ ನಟಿಸುತ್ತಿದ್ದಾರೆ. ಬಹಳ ಶ್ರಮಪಟ್ಟು ಮೇಲಕ್ಕೆ ಬಂದ ಇವರ 50ನೇ ಸಿನಿಮಾಕ್ಕೆ ಶುಭವಾಗಲಿ. ಪುನೀತ್ ಚಿತ್ರಗಳಲ್ಲಿಯೂ ಅಭಿನಯಿಸಿರುವ ಯೋಗಿ ನಮ್ಮ ಕುಟುಂಬದ ಹುಡುಗನಿದ್ದಂತೆ. ಅವರ ‘ನಂದ ಲವ್ಸ್ ನಂದಿತಾ’ ಚಿತ್ರದಂತೆ ಈ ಚಿತ್ರವೂ ದೊಡ್ಡ ಮಟ್ಟದ ಯಶಸ್ಸು ಗಳಿಸಲಿ’ ಎಂದರು ಶಿವಣ್ಣ.

ಕನ್ನಡದ ಜತೆಗೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೂ ಚಿತ್ರ ಸಿದ್ಧಗೊಳ್ಳುತ್ತಿದ್ದು, ಟೈಟಲ್ ಟೀಸರ್ ಅನ್ನು ತಂಡ ಬಿಡುಗಡೆಗೊಳಿಸಿದೆ. ‘ಶಿವಣ್ಣ ಮತ್ತು ಅವರ ಕುಟುಂಬ ನನಗೆ ತಮ್ಮನ ಸ್ಥಾನ ನೀಡಿದೆ. ಅವರಿಂದ ಈ ಚಿತ್ರದ ಶೀರ್ಷಿಕೆ ಬಿಡುಗಡೆಗೊಂಡಿದ್ದು ಅತ್ಯಂತ ಸಂತಸದ ಸಂಗತಿ. ನನ್ನ ಸಿನಿಪಯಣದಲ್ಲಿ ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಮತ್ತೊಂದು ಲೆಕ್ಕ. ಈ ಚಿತ್ರದಲ್ಲಿ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದೇನೆ. ಈ ಸಿನಿಮಾದಲ್ಲಿ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಚಿಕ್ಕ ವಯಸ್ಸಿನಲ್ಲಿಯೇ ನಾಯಕನಾದೆ. ಸೋಲು, ಗೆಲುವು ಎಲ್ಲವನ್ನೂ ಕಂಡೆ. ಮತ್ತೆ ಪುಟಿದೇಳಲು ಸಿದ್ಧನಾಗಿದ್ದೇನೆ’ ಎಂದರು ಯೋಗಿ.

‘ಚಿತ್ರದಲ್ಲಿ ಬಾಲಿವುಡ್ ಸೇರಿದಂತೆ ತೆಲುಗು, ತಮಿಳು ಮತ್ತು ಮಲೆಯಾಳ ಭಾಷೆಯ ಕಲಾವಿದರು ನಟಿಸಲಿದ್ದಾರೆ. ದೊಡ್ಡ ಬಜೆಟ್ ಸಿನಿಮಾ. ಮಂಗಳೂರು, ಮೈಸೂರು, ಚೆನ್ನೈ ಸೇರಿದಂತೆ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡುವ ಯೋಜನೆಯಿದೆ. ಮಾರ್ಚ್ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಬರೀ ಆ್ಯಕ್ಷನ್ ಅಷ್ಟೇ ಅಲ್ಲ, ಕಣ್ಣೀರಿನ ಕಥೆಯೂ ಚಿತ್ರದಲ್ಲಿದೆ. ಮುಂದಿನ ದಿನಗಳಲ್ಲಿ ಉಳಿದ ಮಾಹಿತಿ ನೀಡುತ್ತೇವೆ’ ಎಂದರು ನಿರ್ದೇಶಕ.

ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.