ಮುಂಬೈ: ನಟಿ ಪೂಜಾ ಹೆಗ್ಡೆ ನಟಿಸಿರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಟ್ರೇಲರ್ ಬಿಡುಗಡೆ ನಂತರದಲ್ಲಿ ಚಿತ್ರದ ಕೆಲವು ಅಂಶಗಳು ಟ್ರೋಲ್‌ಗೆ ಒಳಗಾಗಿರುವ ಬಗ್ಗೆ ನಟಿ ಪೂಜಾ ಪ್ರತಿಕ್ರಿಯಿಸಿದ್ದಾರೆ.

‘ಕೆಲವರಿಗೆ ಟ್ರೇಲರ್ ಇಷ್ಟವಾಗದಿದ್ದರೂ ಪರವಾಗಿಲ್ಲ. ಎಲ್ಲರನ್ನು ಸಂತೋಷಪಡಿಸಲು ಸಾಧ್ಯವಿಲ್ಲ. ಒಂದು ವರ್ಗದ ಜನರು ಇಷ್ಟಪಟ್ಟರೆ, ಮತ್ತೊಂದು ವರ್ಗದ ಪ್ರೇಕ್ಷಕರು ಇಷ್ಟಪಡುವುದಿಲ್ಲ. ನಮಗೆಲ್ಲರಿಗೂ ಏನನ್ನಾದರೂ ಇಷ್ಟಪಡುವ ಅಥವಾ ಇಷ್ಟಪಡದಿರುವ ಹಕ್ಕಿದೆ’ ಎಂದು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ಪೂಜಾ ತೆರೆ ಹಂಚಿಕೊಂಡಿದ್ದಾರೆ. ಆದರೆ ಈ ಚಿತ್ರದ ಕೆಲವು ಅಂಶಗಳು ವಾಸ್ತವಿಕತೆಗಿಂತ ಭಿನ್ನವಾಗಿದ್ದು, ಚಿತ್ರದ ಎಡಿಟಿಂಗ್ ಕೂಡ ಉತ್ತಮವಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದೆ.

ಆದರೆ, ಜನರು ಚಿತ್ರಕ್ಕೆ ಅವಕಾಶ ನೀಡಬೇಕು ಹಾಗೂ ಚಿತ್ರವು ಪ್ರೇಕ್ಷಕರಿಗೆ ಖಂಡಿತ ಮನರಂಜನೆ ನೀಡುತ್ತದೆ. ಚಿತ್ರ ನೋಡಿದ ನಂತರ ಹೀಗಾಗಲೇ ಗ್ರಹಿಸಿಕೊಂಡಿರುವ ಭಾವನೆ ಬದಲಾಗುತ್ತದೆ ಎಂದು ನಟಿ ಭರವಸೆ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಾಣದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ, ಪಾಲಕ್ ತಿವಾರಿ, ಸಿದ್ಧಾರ್ಥ್ ನಿಗಮ್ ಸೇರಿದಂತೆ ಶೆಹನಾಜ್ ಗಿಲ್ ಅವರು ಅಭಿನಯಿಸಿದ್ದಾರೆ. ಇದೇ 21(ಏಪ್ರಿಲ್) ರಂದು ಈದ್ ಪ್ರಯುಕ್ತ ಚಿತ್ರಮಂದಿರಗಳಿಗೆ ಬರಲಿದೆ.

ಇವನ್ನೂ ಓದಿ:

ಬಾಡಿ ಶೇಮಿಂಗ್ ಬಗ್ಗೆ ನಟಿ ರಾಧಿಕಾ ಆಪ್ಟೆ ಬೇಸರದ ಮಾತು

ಶೂಟಿಂಗ್ ವೇಳೆ ನಟ ಸಂಜಯ್ ದತ್ಗೆ ಗಾಯ?

‘ಕೆಡಿ’ ಚಿತ್ರದ ಶೂಟಿಂಗ್ ವೇಳೆಗೆ ಬಾಂಬ್ ಸಿಡಿತ: ನಟ ಸಂಜಯ್ ದತ್ಗೆ ಗಾಯ?

ನಟಿ ಪರಿಣೀತಿ ಚೋಪ್ರಾ ಜೊತೆ ಮದುವೆ ವದಂತಿ: ಎಎಪಿ ಸಂಸದ ರಾಘವ್ ಚಡ್ಡಾ ಹೇಳಿದ್ದೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.