ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಸ್ಸಿಂಗ್‌ಗೆ ಕೊರೊನಾ ಭೀತಿ!

Last Updated 13 ಮೇ 2020, 19:30 IST
ಅಕ್ಷರ ಗಾತ್ರ

ಕೊರೊನಾ ವೈರಾಣು ಸೃಷ್ಟಿಸಿರುವ ಸಮಸ್ಯೆಯಿಂದಾಗಿ ಜನ ಅಂತರ ಕಾಯ್ದುಕೊಂಡು ವ್ಯವಹರಿಸುವುದು ಅನಿವಾರ್ಯವಾಗಿದೆ. ಹೀಗಿರುವಾಗ, ಕೆಲವು ಸಿನಿಮಾಗಳಿಗೆ ಅತ್ಯಗತ್ಯವಾದ ಹಸಿಬಿಸಿ ದೃಶ್ಯಗಳ ಚಿತ್ರೀಕರಣ ಹೇಗೆ ಸಾಧ್ಯ?!

‘ಲಾಕ್‌ಡೌನ್‌ ತೆರವಾದ ನಂತರವೂ ಈ ರೀತಿಯ ದೃಶ್ಯಗಳ ಚಿತ್ರೀಕರಣವು ತುಸು ತಲೆಬಿಸಿಯ ಕೆಲಸವೇ ಆಗಬಹುದು’ ಎನ್ನುತ್ತಾರೆ ಅಮಂಡಾ. ಇವರು ಗೇಮ್‌ ಆಫ್‌ ಥ್ರೋನ್ಸ್‌ನಂತಹ ಜನಪ್ರಿಯ ವೆಬ್ ಸರಣಿಗಳಲ್ಲಿ ಕೆಲಸ ಮಾಡಿದವರು. ಇವರು ಈಗ ಎಂಎಕ್ಸ್‌ ಪ್ಲೇಯರ್ ಒಟಿಟಿಗಾಗಿ ಸಿದ್ಧವಾಗಿರುವ ವೆಬ್ ಸರಣಿಯೊಂದಕ್ಕೆ ಕೆಲಸ ಮಾಡಿದ್ದಾರೆ.

‘ಚಿತ್ರೀಕರಣವನ್ನು ಸುರಕ್ಷಿತವಾಗಿ ನಡೆಸಲು ಅನುವಾಗುವಂತೆ ನಾವು ಸ್ವಚ್ಛತಾ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಒಬ್ಬರಿಂದ ಇನ್ನೊಬ್ಬರು ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ದೃಶ್ಯಗಳ ಚಿತ್ರೀಕರಣದ ವೇಳೆ ಅಲ್ಲಿ ಇರಬೇಕಾದವರ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಹಸಿಬಿಸಿ ದೃಶ್ಯಗಳ ಚಿತ್ರೀಕರಣವನ್ನು ನಾವು ಸೃಜನಶೀಲವಾಗಿ ಮಾಡಬೇಕಾಗುತ್ತದೆ. ಇದನ್ನು ನನ್ನ ಪ್ರಕಾರ ಕಿಸ್ಸಿಂಗ್ ಇಲ್ಲದೆಯೂ ಚಿತ್ರೀಕರಿಸಬಹುದು’ ಎಂದು ಅಮಂಡಾ ಹೇಳಿದ್ದಾರೆ.

‘ಈ ವೈರಾಣು ನಮ್ಮ ಜೊತೆ ಕೆಲವು ಕಾಲ ಇರುತ್ತದೆ. ಇದರ ಪರಿಣಾಮವಾಗಿ ಸಿನಿಮಾ ಉದ್ಯಮ ಮಾತ್ರವಲ್ಲದೆ, ನಮ್ಮ ಬದುಕಿನ ಹಲವು ಆಯಾಮಗಳ ಮೇಲೆ ಇದು ಪ್ರಭಾವ ಬೀರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಸಿಬಿಸಿ ದೃಶ್ಯಗಳ ಚಿತ್ರೀಕರಣದಲ್ಲಿ ಕೂಡ ಸುರಕ್ಷಿತ ವಾತಾವರಣ ಸೃಷ್ಟಿಸುವುದು ತಮ್ಮ ಜವಾಬ್ದಾರಿ ಎಂದು ಅಮಂಡಾ ಹೇಳಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT