ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಕ್ಸ್ ಜೊತೆ ಸೆಕ್ಸ್ ಮಾಡಿದ್ರಾ..? ಕರಣ್ ಜೋಹರ್‌ಗೆ ಜಾಹ್ನವಿ ಕೊಟ್ಟ ಉತ್ತರ ಏನು?

ಫಾಲೋ ಮಾಡಿ
Comments

ಬೆಂಗಳೂರು: ಬಾಲಿವುಡ್ ಬೇಬಿ ಎಂದು ಖ್ಯಾತವಾಗಿರುವ ಹಾಗೂ ತಮ್ಮ ಹಾಟ್ ಲುಕ್‌ನಿಂದಲೇ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಜಾಹ್ನವಿ ಕಪೂರ್ ಕಾಫೀ ವಿತ್ ಕರಣ್‌ ಸೀಸನ್ 7 ನ ಎರಡನೇ ಸಂಚಿಕೆಯ ಅತಿಥಿಯಾಗಿದ್ದರು.

ಜಾಹ್ನವಿ ಜೊತೆ ಅವರ ಆಪ್ತ ಸ್ನೇಹಿತೆ ಸಾರಾ ಅಲಿಖಾನ್ ಕೂಡ ಭಾಗವಹಿಸಿದ್ದರು. ಈ ಇಬ್ಬರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾರರು ಎಂಬಂತ ಸ್ನೇಹಿತೆಯರು ಎಂಬ ಗುಲ್ಲು ಬಾಲಿವುಡ್‌ನಲ್ಲಿ ಇರುವುದರಿಂದ ಕರಣ್ ಇವರಿಬ್ಬರನ್ನೂ ಒಟ್ಟಿಗೆ ಕಾಫಿಗೆ ಕರೆದಿದ್ದು ವಿಶೇಷವಾಗಿತ್ತು.

ಈ ವೇಳೆ ನಿರೂಪಕ ಕರಣ್ ಜೋಹರ್ ಅವರು ಜಾಹ್ನವಿ ನಿರೀಕ್ಷೆನೇ ಮಾಡಿರದಿದ್ದ ಪ್ರಶ್ನೆಯೊಂದನ್ನು ಎಸೆದರು. ಇದಕ್ಕೆ ಅವಕ್ಕಾದ ಜಾಹ್ನವಿ ಒಂದು ಕ್ಷಣ ಉತ್ತರ ಕೊಡದೇ ಹಾಗೇ ಮೌನವಾಗಿದ್ದರು.

‘ಜಾಹ್ನವಿ ನೀವು ನಿಮ್ಮ ಎಕ್ಸ್ ಬಾಯ್‌ಫ್ರೆಂಡ್ ಜೊತೆ ಎಂದಾದರೂ ಸೆಕ್ಸ್ ಮಾಡಿದ್ರಾ?’ಎಂದು ಕರಣ್ ಜಾಹ್ನವಿಗೆ ನೇರ ಪ್ರಶ್ನೆ ಎಸೆದರು. ಇದರಿಂದ ಸಾವರಿಸಿಕೊಂಡ ಜಾಹ್ನವಿ, ‘ಇಲ್ಲ, ನಾನು ಹಿಂದೆ ಹೋಗಲು ಬಯಸುವುದಿಲ್ಲ’ ಎಂದು ಕರಣ್ ಅವರ ಕುತೂಹಲಕ್ಕೆ ತಣ್ಣೀರೆರಚಿದರು.

ಜಾಹ್ನವಿ ಹಾಗೂ ಸಾರಾ ಆಲಿಖಾನ್ ಇಬ್ಬರು ಸಹೋದರರ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಈ ವಿಚಾರವನ್ನೂ ಕೂಡ ಕರಣ್ ಪ್ರಸ್ತಾಪಿಸಿದರು. ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂದೆ ಅವರ ಮೊಮ್ಮಕ್ಕಳಾದ ವೀರ್ ಪಹಾರಿಯಾ ಜೊತೆ ಜಾಹ್ನವಿ ಡೇಟಿಂಗ್‌ನಲ್ಲಿದ್ದರು ಹಾಗೂ ಸಾರಾ, ಶಿಖರ್ ಪಹಾರಿಯಾ ಜೊತೆ ಡೇಟಿಂಗ್‌ನಲ್ಲಿದ್ದರು ಎನ್ನಲಾಗಿತ್ತು.

ಕಾಫೀ ವಿತ್ ಕರಣ್ ಸೀಸನ್ 7 ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಕಂತುಗಳಲ್ಲಿ ಪ್ರಸಾರವಾಗುತ್ತಿದೆ. ಕಳೆದ ವಾರ ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಈ ಶೋದಲ್ಲಿ ಭಾಗವಹಿಸಿದ್ದರು.

ಇನ್ನು ಜಾಹ್ನವಿ ಅವರ ಗುಡ್ ಲಕ್ ಜೆರ್ರಿ ಸಿನಿಮಾ ಇದೇ ಜುಲೈ 29 ರಂದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT