ಬುಧವಾರ, ಜೂನ್ 3, 2020
27 °C

ಭೂಮಿನೇ ಪಳಗಿಸುವ ಕೋಟಿಗೊಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನಿರ್ದೇಶಕ ಶಿವ ಕಾರ್ತಿಕ್‌ ಮತ್ತು ನಟ ಸುದೀಪ್ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ಕೋಟಿಗೊಬ್ಬ 3’ ಸಿನಿಮಾ ಚಂದನವನದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ, ಇದರ ಚಿತ್ರೀಕರಣ ಪೂರ್ಣಗೊಂಡಿದ್ದು, ಹತ್ತು ದಿನಗಳ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವಷ್ಟೇ ಬಾಕಿ ಉಳಿದಿದೆಯಂತೆ. ಬೇಸಿಗೆ ರಜೆ ವೇಳೆಗೆ ಥಿಯೇಟರ್‌ಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿತ್ತು. ಆದರೆ, ಕೊರೊನಾ ಮಹಾಮಾರಿ ಇದಕ್ಕೆ ಅಡ್ಡಗಾಲು ಹಾಕಿತು. 

ಲಾಕ್‌ಡೌನ್‌ಗೂ ಮೊದಲೇ ಬಿಡುಗಡೆಯಾಗಿದ್ದ ಈ ಚಿತ್ರದ ಟೀಸರ್‌ ಸುದೀಪ್‌ ಅವ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿತ್ತು. ಈಗ ಲಾಕ್‌ಡೌನ್ ಅವಧಿಯಲ್ಲಿ ಅಭಿಮಾನಿಗಳ ಬೇಸರ ಕಳೆಯಲು ಚಿತ್ರತಂಡ ಮೊದಲ ಲಿರಿಕಲ್‌ ವಿಡಿಯೊ ಸಾಂಗ್ ಅನ್ನು ಬಿಡುಗಡೆ ಮಾಡಿದೆ. ‘ಆಕಾಶನೇ ಅದರಿಸುವ... ಈ ಭೂಮಿನೇ ಪಳಗಿಸುವ...’ ಈ ಹಾಡು ಯೂಟ್ಯೂಬ್‌ನಲ್ಲಿ ಮೊದಲ ಟ್ರೆಂಡಿಂಗ್‌ನಲ್ಲಿದೆ. ಆನಂದ್ ಆಡಿಯೊದ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಾಡು ಬಿಡುಗಡೆಯಾಗಿದೆ.

‘ಕೋಟಿಗೊಬ್ಬ 3’ ಸಿನಿಮಾದ ಲಿರಿಕಲ್ ವಿಡಿಯೊವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಮೂರ್ನಾಲ್ಕು ದಿನಗಳ ಹಿಂದೆ ನಟ ಸುದೀಪ್ ಟ್ವೀಟ್ ಮಾಡಿದ್ದರು. ವಿ. ನಾಗೇಂದ್ರಪ್ರಸಾದ್‌ ಬರೆದಿರುವ ಈ ಸಾಂಗ್‌ಗೆ ವ್ಯಾಸರಾಜ್‌ ಸೋಸಲೆ ಧ್ವನಿಯಾಗಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಇದಕ್ಕೆ ಸೂರಪ್ಪಬಾಬು ಬಂಡವಾಳ ಹೂಡಿದ್ದಾರೆ.

ಪ್ರಸ್ತುತ ಅನೂಪ್‌ ಭಂಡಾರಿ ನಿರ್ದೇಶನದ ‘ಫ್ಯಾಂಟಮ್‌’ ಚಿತ್ರದಲ್ಲಿ ಸುದೀ‍ಪ್‌ ನಟಿಸುತ್ತಿದ್ದಾರೆ. ಇದರ ಶೂಟಿಂಗ್‌ಗೂ ಕೊರೊನಾ ಬಿಸಿ ತಟ್ಟಿದೆ. ಜಾಕ್‌ ಮಂಜು ಇದಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇದರಲ್ಲಿ ಸುದೀಪ್‌ಗೆ ಇಬ್ಬರು ಹೀರೊಯಿನ್‌ಗಳು ಜೋಡಿಯಾಗಲಿದ್ದು, ಈಗಾಗಲೇ ಬೆಂಗಳೂರು ಮೂಲದ ಮಾಡೆಲ್‌ ನೀತು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮತ್ತೊಬ್ಬ ನಾಯಕಿಯ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಜೊತೆಗೆ, ಅತಿಥಿ ಪಾತ್ರದಲ್ಲೂ ನಾಯಕಿಯೊಬ್ಬರು ನಟಿಸಲಿದ್ದಾರೆ ಎಂಬುದು ಚಿತ್ರತಂಡದ ವಿವರಣೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.