ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಟಾಕಿ ಪೋರಿಯೊ..’ ಹಾಡಿನಲ್ಲಿ ಕಿಚ್ಚ ಸಖತ್‌ ಸ್ಟೆಪ್ಸ್‌

Last Updated 7 ಮಾರ್ಚ್ 2021, 7:40 IST
ಅಕ್ಷರ ಗಾತ್ರ

ಬೆಂಗಳೂರು: ಏಪ್ರಿಲ್‌ ತಿಂಗಳಲ್ಲಿ ಸಾಲು ಸಾಲು ಬಿಗ್‌ಬಜೆಟ್‌ ಚಿತ್ರಗಳು ಬಿಡುಗಡೆಯಾಗಲು ಸಜ್ಜಾಗಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ–3 ಚಿತ್ರವೂ ಇದರಲ್ಲಿ ಒಂದಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡವು ಚಿತ್ರದ ಮೇಕಿಂಗ್‌ ವಿಡಿಯೊವನ್ನು ಬಿಡುಗಡೆ ಮಾಡಿದೆ.

ಆನಂದ್‌ ಆಡಿಯೊ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೊ ಅಪ್‌ಲೋಡ್‌ ಮಾಡಲಾಗಿದ್ದು, ಚಿತ್ರದಲ್ಲಿನ ಹಾಡುಗಳ ಚಿತ್ರೀಕರಣದ ದೃಶ್ಯಗಳೇ ಬಹುತೇಕ ಇದರಲ್ಲಿದೆ. ಚಿತ್ರದ ‘ಪಟಾಕಿ ಪೋರಿಯೊ..’ ಹಾಡಿನ ಲಿರಿಕಲ್‌ ವಿಡಿಯೊವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇದು ಜನರನ್ನು ಸೆಳೆದಿದೆ. ಮೇಕಿಂಗ್‌ ವಿಡಿಯೊದಲ್ಲೂ ಈ ಹಾಡಿನ ಚಿತ್ರೀಕರಣದ ದೃಶ್ಯಗಳಿವೆ. ವಿಜಯ್‌ ಪ್ರಕಾಶ್‌ ಹಾಗೂ ಅನುರಾಧ ಭಟ್‌ ಈ ಹಾಡನ್ನು ಹಾಡಿದ್ದು, ಅನೂಪ್‌ ಭಂಡಾರಿ ಸಾಹಿತ್ಯವಿದೆ. ಅರ್ಜುನ್‌ ಜನ್ಯ ಇದಕ್ಕೆ ಸಂಗೀತ ನೀಡಿದ್ದಾರೆ.

ಚಿತ್ರದಲ್ಲಿ ಹಲವು ಲುಕ್‌ಗಳಲ್ಲಿ ಸುದೀಪ್‌ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಮೇಕಿಂಗ್‌ ವಿಡಿಯೊದಿಂದ ಸ್ಪಷ್ಟ. ಶಿವಕಾರ್ತಿಕ್‌ ನಿರ್ದೇಶನ ಈ ಚಿತ್ರವು ಕಳೆದ ವರ್ಷವೇ ತೆರೆಯ ಮೇಲೆ ಬರಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದ ಚಿತ್ರಬಿಡುಗಡೆ ಮುಂದೂಡಲಾಗಿತ್ತು. ಮಲಯಾಳಂನ ಖ್ಯಾತ ನಟಿ ಮಡೋನಾ ಸೆಬಾಸ್ಟಿಯನ್‌ ಈ ಚಿತ್ರದ ಮೂಲಕ ಚಂದನವನಕ್ಕೂ ಕಾಲಿಡುತ್ತಿದ್ದು, ಶ್ರದ್ಧಾ ದಾಸ್‌ ಕೂಡಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT