ಭಾನುವಾರ, ಮಾರ್ಚ್ 29, 2020
19 °C

'ಕೋಟಿಗೊಬ್ಬ 3' ಟೀಸರ್‌: ಇಂಟರ್‌ನ್ಯಾಷನಲ್‌ ಕಿಲಾಡಿಯಾದ ಕಿಚ್ಚ ಸುದೀಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸೌಂಡು ಮಾಡುತ್ತಿದೆ.

 ‘ಕೋಟಿಗೊಬ್ಬ 3’ ಚಿತ್ರತಂಡ ಮಹಾಶಿವರಾತ್ರಿಯಂದು ಸುದೀಪ್‌ ಅಭಿಮಾನಿಗಳಿಗೆ ಟೀಸರ್‌ನ ಭರ್ಜರಿ ಗಿಫ್ಟ್‌ ನೀಡಿದೆ. ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ 5 ಗಂಟೆಯಲ್ಲೇ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿರುವುದು ದಾಖಲೆಯಾಗಿದೆ. 

ಟೀಸರ್‌ನಲ್ಲಿನ ಸುದೀಪ್‌ ಆ್ಯಕ್ಷನ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಟೀಸರ್‌ ನೋಡಿದರೆ ‘ಕೋಟಿಗೊಬ್ಬ 2‘ ಚಿತ್ರದ ಮುಂದುವರಿದ ಭಾಗವೇ ‘ಕೋಟಿಗೊಬ್ಬ 3‘ ಎಂಬುದರಲ್ಲಿ ಅನುಮಾನವಿಲ್ಲ! ಪೊಲೀಸ್‌ ಅಧಿಕಾರಿ ರವಿಶಂಕರ್‌ ತಮ್ಮ ಹಿರಿಯ ಅಧಿಕಾರಿಗಳಿಗೆ ‘ಅವನ್‌ ಇಬ್ರು ಅಲ್ಲಾ ಸರ್ ಒಬ್ಬ, ಅವನನ್ನು ಲೋಕಲ್‌ನಲ್ಲಿ ಹೊಡೆದಾಕಬೇಕಿತ್ತು ಎಂದು ಹೇಳುವ ಮಾತನ್ನು ನೋಡಿದರೆ ಮತ್ತೆ ಸುದೀಪ್‌ ಶಿವ ಮತ್ತು ಸತ್ಯ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಎಂಬುದು ಗೊತ್ತಾಗುತ್ತದೆ. ಆದರೆ ಈ ಸುಳಿವನ್ನು ಟೀಸರ್‌ನಲ್ಲಿ ನೀಡಲಾಗಿಲ್ಲ.

ಕೇರಳದ ಬೆಡಗಿ ಮಡೋನ್ನಾ ಸೆಬಾಸ್ಟಿಯನ್‌ ಅವರು ಕಿಚ್ಚನಿಗೆ ನಾಯಕಿಯಾಗಿದ್ದಾರೆ. ಬಾಲಿವುಡ್‌ನ ಸುಧಾಂಶು ಪಾಂಡೆ, ಅಫ್ತಾಪ್‌ ಶಿವದಾಸನಿ ಮತ್ತು ಶ್ರದ್ಧಾ ದಾಸ್‌ ಕೂಡ ನಟಿಸಿರುವುದು ಈ ಚಿತ್ರದ ವಿಶೇಷ.

ಶಿವ ಕಾರ್ತಿಕ್‌ ನಿರ್ದೇಶನದ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿರುವ ‘ಕೋಟಿಗೊಬ್ಬ 3‘ ಸಿನಿಮಾಗೆ ಸೂರಪ್ಪಬಾಬು ಬಂಡವಾಳ ಹೂಡಿದ್ದಾರೆ. ಈ ಚಿತ್ರ ಇದೇ ಬೇಸಿಗೆಯಲ್ಲಿ ತೆರೆಗೆ ಬರಲಿದೆ. 

ಪೈಲ್ವಾನ್‌ ಚಿತ್ರದ ಬಳಿಕ ಕಿಚ್ಚ ಸುದೀಪ್‌ ಪ್ರಭುದೇವ ನಿರ್ದೇಶನದ ‘ದಬಾಂಗ್‌ 3’ ಚಿತ್ರದಲ್ಲಿ ನಟಿಸಿದ್ದರು. ಇದರಲ್ಲಿ  ನಟ ಸಲ್ಮಾನ್‌ಖಾನ್‌ ವಿರುದ್ಧ ಅಬ್ಬರಿಸಿದ್ದರು. ಇದೀಗ ಸುದೀಪ್‌ ಅಭಿಮಾನಿಗಳು ‘ಕೋಟಿಗೊಬ್ಬ 3‘ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾ ಬಳಿಕ ಅನೂಪ್‌ ಭಂಡಾರಿ ನಿರ್ದೇಶನದ ‘ಫ್ಯಾಂಟಮ್‌’ ಸಿನಿಮಾದಲ್ಲಿ ಸುದೀ‍ಪ್‌ ನಟಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು