ಶನಿವಾರ, ಡಿಸೆಂಬರ್ 14, 2019
24 °C

ಪುಲ್ಕಿತ್‌ ಪ್ರೀತಿಯ ಕಬಂಧಬಾಹುವಿನಲ್ಲಿ ಬಂಧಿಯಾದ ಕೃತಿ ಕರಬಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಂದನವನದ ಮುದ್ದು ನಟಿ ಕೃತಿ ಕರಬಂದ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹೌದು, ಈ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ.

ಸೌಂದರ್ಯ ಮತ್ತು ಪ್ರತಿಭೆಯ ಸಮಪಾಕದಂತಿರುವ, ಕನ್ನಡದ ಗೂಗ್ಲಿ ಹುಡುಗಿ ಎಂದೇ ಖ್ಯಾತರಾಗಿರುವ ಕೃತಿ ಕರಬಂದ ಬಾಲಿವುಡ್‌ ನಟ ಪುಲ್ಕಿತ್‌ ಸಾಮ್ರಾಟ್‌ ಅವರ ಕಬಂಧಬಾಹುವಿನಲ್ಲಿ ಬಂಧಿಯಾಗಿರುವುದಾಗಿ ಅವರು ಹೇಳಿದ್ದಾರೆ. ಕನ್ನಡದಲ್ಲಿ ಗೂಗ್ಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕೃತಿ ನಟಿಸಿದ್ದಾರೆ.

 
 
 
 

 
 
 
 
 
 
 
 
 

Who does it better!!! 😝😝😝 Chanduuuuu.. tell tell! @pulkitsamrat #pagalpanti #chaandjaan #poledancing #goals

A post shared by Kriti Kharbanda (@kriti.kharbanda) on

ಇ–ಟೈಮ್ಸ್‌ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನಲ್ಲಿ ಪುಲ್ಕಿತ್‌ ಸಾಮ್ರಾಟ್‌ ಜೊತೆ ಡೇಟಿಂಗ್‌ನಲ್ಲಿ ಇರುವುದಾಗಿ ತಿಳಿಸಿದ್ದಾರೆ. ತಂದೆ ತಾಯಿಯವರಿಗೆ ಈ ವಿಷಯ ತಿಳಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಪುಲ್ಕಿತ್ ಅವರನ್ನು ಮದುವೆಯಾಗಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಪುಲ್ಕಿತ್‌ ಸಾಮ್ರಾಟ್‌ ಶ್ವೇತಾ ಅವರನ್ನು ಮದುವೆಯಾಗಿದ್ದರು. ವಿವಾಹವಾಗಿ ಒಂದೇ ವರ್ಷದಲ್ಲಿ ವಿಚ್ಚೇದನ ಪಡೆದಿದ್ದರು. ಬಳಿಕ ನಟಿ ಯಾಮಿ ಗೌತಮಿ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು. 

ಕಳೆದೊಂದು ವರ್ಷದಿಂದ ಸುತ್ತಾಡುತ್ತಿದ್ದ ಈ ಜೋಡಿ ಎಲ್ಲಿಯೂ ಡೇಟಿಂಗ್‌ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಮಾಧ್ಯಮದವರ ಪ್ರಶ್ನೆಗಳಿಗೆ ಅಂತಹದ್ದು ಏನು ಇಲ್ಲ ಎಂದು ಹೇಳಿದ್ದರು. ಇದೀಗ ಅವರೇ ಡೇಟಿಂಗ್‌ನಲ್ಲಿ ಇರುವುದನ್ನು ಒಪ್ಪಿಕೊಂಡಿದ್ದಾರೆ.

ಪುಲ್ಕಿತ್‌ ಜೊತೆ ಇರುವ ಹಲವು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೃತಿ ಹಂಚಿಕೊಂಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು