ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kshetrapathi Trailer: ಉತ್ತರ ಕರ್ನಾಟಕ ಶೈಲಿ ಖಡಕ್ ಡೈಲಾಗ್ ಹೊಡೆದ ನವೀನ್ ಶಂಕರ್

ಉತ್ತರ ಕರ್ನಾಟಕದ ಯುವ ರೈತನ ಕಥಾ ಹಂದರವನ್ನು ಒಳಗೊಂಡಿರುವ ನಟ ನವೀನ್ ಶಂಕರ್ ಅವರ ‘ಕ್ಷೇತ್ರಪತಿ’ ಸಿನಿಮಾದ ಟ್ರೇಲರ್ ಯುಟ್ಯೂಬ್‌ನಲ್ಲಿ ಗುರುವಾರ ಬಿಡುಗಡೆಯಾಗಿದೆ.
Published 11 ಆಗಸ್ಟ್ 2023, 6:44 IST
Last Updated 11 ಆಗಸ್ಟ್ 2023, 6:44 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕದ ಯುವ ರೈತನ ಕಥಾ ಹಂದರವನ್ನು ಒಳಗೊಂಡಿರುವ ನಟ ನವೀನ್ ಶಂಕರ್ ಅವರ ‘ಕ್ಷೇತ್ರಪತಿ’ ಸಿನಿಮಾದ ಟ್ರೇಲರ್ ಯುಟ್ಯೂಬ್‌ನಲ್ಲಿ ಗುರುವಾರ ಬಿಡುಗಡೆಯಾಗಿದೆ.

Gultoo ಖ್ಯಾತಿಯ ನವೀನ್ ಶಂಕರ್ ಅವರ ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲಿ ಖಡಕ್ ಸಂಭಾಷಣೆಗಳು ಚಿತ್ರ ರಸಿಕರ ಗಮನ ಸೆಳೆದಿವೆ. ಇಲ್ಲಿವರೆಗೆ 1.65 ಲಕ್ಷ ವೀಕ್ಷಣೆ ಕಂಡಿದೆ.

ಆಗಸ್ಟ್ 18ರಂದು 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕ್ಷೇತ್ರಪತಿ ಬಿಡುಗಡೆಯಾಗಲಿದೆ.

ಉತ್ತರ ಕರ್ನಾಟಕದ ಜವಾರಿ ಭಾಷಾ ಶೈಲಿಯಲ್ಲಿ ತಯಾರಾಗಿರುವ ಚಿತ್ರದಲ್ಲಿ, ಉತ್ತರ ಕರ್ನಾಟಕದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗದಗ, ತಿಮ್ಮಾಪುರ, ಲಕ್ಕುಂಡಿ, ವಿಜಯಪುರ, ಇಳಕಲ್ ಹಾಗೂ ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ದೇಶದ ರೈತ ಸಮುದಾಯ ಎದುರಿಸುತ್ತಿರುವ ಸಂಕಷ್ಟಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ. ಹೋರಾಟದ ಕಥೆಯನ್ನು ಒಳಗೊಂಡಿದೆ.

ಶ್ರೀಕಾಂತ್ ಕಟಗಿ ನಿರ್ದೇನದ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿ 3 ಹಾಡುಗಳನ್ನು ಬರೆದಿದ್ದಾರೆ. ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಚಿತ್ರದ ನಾಯಕಿ. ಅಚ್ಯುತ್ ಕುಮಾರ್, ಸರ್ದಾರ್, ರಾಹುಲ್ ಐನಾಪುರ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT