ಬುಧವಾರ, ನವೆಂಬರ್ 25, 2020
22 °C

ಒಟಿಟಿಯಲ್ಲಿ ‘ಲಕ್ಷ್ಮೀ’, ‘ಸೂರರೈ ಪೊಟ್ರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೀ

ಕಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾ ‘ಕಾಂಚನಾ’ ಕನ್ನಡದಲ್ಲೂ ಹೆಸರು ಗಳಿಸಿತ್ತು. ಅದೇ ಸಿನಿಮಾ ಬಾಲಿವುಡ್‌ನಲ್ಲಿ ‘ಲಕ್ಷ್ಮೀ’ ಹೆಸರಿನಲ್ಲಿ ರಿಮೇಕ್ ಆಗಿದೆ. ಅಕ್ಷಯ್‌ ಕುಮಾರ್‌ ನಟನೆಯ ಈ ಚಿತ್ರಕ್ಕೆ ರಾಘವ ಲಾರೆನ್ಸ್‌ ನಿರ್ದೇಶನವಿದೆ.

ಕಿಯಾರಾ ಅಡ್ವಾಣಿ ನಾಯಕಿಯಾಗಿ ಅಕ್ಷಯ್‌ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾವು ನವೆಂಬರ್‌ 9 ರಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಸಂಸ್ಥೆಯು ₹125 ಕೋಟಿಗೆ ಖರೀದಿಸಿದೆ ಸಿನಿಮಾವನ್ನು ಖರೀದಿ ಮಾಡಿದೆ. ಕೇಪ್ ಆಫ್ ಗುಡ್ ಫಿಲ್ಮ್ಸ್, ಫಾಕ್ಸ್ ಸ್ಟಾರ್ ಸ್ಟುಡಿಯೊಸ್, ಶಬಿನಾ ಎಂಟರ್‌ಟೈನ್‌ಮೆಂಟ್‌, ತುಷಾರ್ ಎಂಟರ್‌ಟೈನ್‌ಮೆಂಟ್‌ ಹೌಸ್‌ ಈ ಸಿನಿಮಾಕ್ಕೆ ಬಂಡವಾಳ ಹೂಡಿಕೆ ಮಾಡಿದೆ.

ಆಯೇಷಾ ರಾಝ್ ಮಿಶ್ರಾ, ತುಷಾರ್ ಕಪೂರ್‌, ಶ್ರದ್ಧಾ ಕೇಲ್‌ಕರ್‌, ತರುಣ್ ಅರೋರಾ ಮುಂತಾದವರು ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಹಿಂದೆ ಸಿನಿಮಾಕ್ಕೆ ಲಕ್ಷ್ಮೀ ಬಾಂಬ್ ಎಂದು ಹೆಸರಿಸಲಾಗಿತ್ತು. ಆದರೆ ಕೆಲವು ಸಂಘಟನೆಗಳ ಆಗ್ರಹದ ಮೇರೆಗೆ ಸಿನಿಮಾ ಶೀರ್ಷಿಕೆಯನ್ನು ‘ಲಕ್ಷ್ಮೀ’ ಎಂದು ಬದಲಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು