ಸಾಮಾಜಿಕ ತಾಣದಲ್ಲಿ ಲಸಿಕೆಬಗ್ಗೆ ಪ್ರಶ್ನೆಕೇಳಿದ್ದ ಟ್ವಿಟರ್ ಬಳಕೆದಾರರೊಬ್ಬರಿಗೆ ನಟಿ ಲಾರಾ ದತ್ತಾ ನೀಡಿದ ಒಂದು ಸಾಲಿನ ಉತ್ತರಕ್ಕೆ ನೆಟ್ಟಿಗರು ಬಿದ್ದೂಬಿದ್ದು ನಗುತ್ತಿದ್ದಾರೆ. ಸರಿಯಾಗೇ ಉತ್ತರ ಕೊಟ್ಟಿದ್ದೀರಿ ಎಂದು ಪ್ರಶಂಸೆಯೂ ವ್ಯಕ್ತವಾಗುತ್ತಿದೆ.

43 ವರ್ಷದ ನಟಿ ಲಾರಾ ದತ್ತಾ ಅವರಿಗೆ ಟ್ವಿಟರ್ನಲ್ಲಿ ಕೋವಿಡ್-19 ಲಸಿಕೆ ಹಾಕಿಸಿಕೊಂಡಿದ್ದೀರಾ? ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಲಾರಾ ದತ್ತಾ ಹಾಸ್ಯಭರಿತ ಉತ್ತರ ನೀಡಿದ್ದಾರೆ. ಆದರೆ ಈ ಹಾಸ್ಯದಲ್ಲೂ ಮಾರ್ಮಿಕ ಸಂದೇಶ ರವಾನೆಯಾಗಿದೆ ಎಂದು ಕೆಲವರು ವಿಶ್ಲೇಷಿಸಿದ್ದಾರೆ.

ಸೆಲೆಬ್ರಿಟಿಗಳ ಖಾಸಗಿ ವಿಚಾರಗಳನ್ನು ಮಾಧ್ಯಮಗಳು, ಅಭಿಮಾನಿಗಳು ಕೆದಕುವ ವಿಚಾರ ಗೊತ್ತೇ ಇದೆ. ಕೆಲವೊಮ್ಮೆ ಇಂತಹ ಸಂಗತಿಗಳಲ್ಲಿ ನಟ-ನಟಿಯರಿಂದ ಕಪಾಳಮೋಕ್ಷಗೊಳ್ಳುವ ಸಂದರ್ಭವೂ ಬರುತ್ತದೆ ಎಂಬುದಕ್ಕೆ ಲಾರಾ ದತ್ತಾರ ಈ ಉತ್ತರ ಸಾಕ್ಷಿಯೆಂಬಂತಿದೆ. ಅಷ್ಟಕ್ಕೂ ಲಾರಾ ದತ್ತಾ ನೀಡಿದ ಉತ್ತರವೇನು ಗೊತ್ತೆ?

ಬ್ಯೂಟಿಫುಲ್ ಬಾಯ್ ಜಾಯ್ ಫೋಟೊ ಪೋಸ್ಟ್ ಮಾಡಿದ ವರುಣ್ ಧವನ್

'ಹೌದು!!! ಲಸಿಕೆ ಹಾಕಿಸಿಕೊಳ್ಳುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿಲ್ಲ ಎಂದ ಮಾತ್ರಕ್ಕೆ ನಾನು ಡೋಸ್ ಹಾಕಿಸಿಕೊಂಡಿಲ್ಲ ಎಂದರ್ಥವಲ್ಲ!!' ಎಂದು ಲಾರಾ ದತ್ತಾ ಪ್ರತಿಕ್ರಿಯಿಸಿದ್ದಾರೆ.

ಲಾರಾ ದತ್ತಾರ ಪ್ರತಿಕ್ರಿಯೆ ಲಸಿಕೆ ಹಾಕಿಸಿಕೊಳ್ಳುವ ಫೋಟೊ ಅಪ್ಲೋಡ್ ಮಾಡುವವರಿಗೆ ನಯವಾಗಿ ತಿವಿದಂತೆಯೂ ಆಗಿದೆ.

ಸೆಲೆಬ್ರಿಟಿಗಳು ಕೂತಿದ್ದು, ನಿಂತಿದ್ದು, ತಿಂದಿದ್ದು ಎಲ್ಲವನ್ನು ಪೋಸ್ಟ್ ಮಾಡಬೇಕು ಎಂದು ಅಭಿಮಾನಿಗಳು ಬಯಸುವುದು ಸಹಜ. ಆದರೆ ಯಾವುದನ್ನು ಪೋಸ್ಟ್ ಮಾಡಬೇಕು ಮತ್ತು ಮಾಡಬಾರದು ಎಂಬ ಸ್ವಾತಂತ್ರವನ್ನು ಸೆಲೆಬ್ರಿಟಿಗಳಿಗೆ ಕೊಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಲಾರಾ ದತ್ತಾ ನಟಿಸಿರುವ 'ಬೆಲ್ ಬಾಟಮ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಜುಲೈ 27ರಂದು ಬಿಡುಗಡೆಗೊಳ್ಳಲಿರುವ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ವಾಣಿ ಕಪೂರ್ ಮತ್ತು ಹುಮಾ ಕುರೇಶಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ರಾಷ್ಟ್ರದಾದ್ಯಂತ ಲಾಕ್ಡೌನ್ ಹೇರಿಕೆಯಾದ ಬಳಿಕ ವಿದೇಶಗಳಲ್ಲಿ ಚಿತ್ರೀಕರಣಗೊಂಡ ಮೊದಲ ಸಿನಿಮಾ ಎನಿಸಿಕೊಂಡಿದೆ.

ಕುಸ್ತಿಗೆ ಕರೆದ ಅಂಡರ್ಟೇಕರ್, ಇನ್ಶೂರೆನ್ಸ್ ಹುಡುಕಾಟದಲ್ಲಿ ಅಕ್ಷಯ್ ಕುಮಾರ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.