ಮಂಗಳವಾರ, ಮಾರ್ಚ್ 31, 2020
19 °C

ಡಾರ್ಲಿಂಗ್‌ ಕೃಷ್ಣನ ಟ್ರೈನ್‌ ಪ್ರಸಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎರಡು ವರ್ಷದ ಹಿಂದೆ ಡಾರ್ಲಿಂಗ್‌ ಕೃಷ್ಣ ‘ಹುಚ್ಚ 2’ ಚಿತ್ರದಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹಾಗೆಂದು ಅವರು ಸುಮ್ಮನಾಗಲಿಲ್ಲ. ಮಿಲನಾ ನಾಗರಾಜ್‌ ಅವರ ಜೊತೆಗೂಡಿ ‘ಲವ್‌ ಮಾಕ್ಟೇಲ್‌’ ಸಿನಿಮಾ ನಿರ್ಮಿಸಿದರು. ಅವರೇ ಬಂಡವಾಳ ಹೂಡಿ, ನಟಿಸಿ, ನಿರ್ದೇಶಿಸಿದ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮದುವೆಯ ಹೊಸ್ತಿಲಿನಲ್ಲಿರುವ ಈ ಜೋಡಿ ಖುಷಿಯ ಅಲೆಯಲ್ಲಿ ತೇಲುತ್ತಿದೆ. 

ಈ ನಡುವೆ ಸಂಜನಾ ಸಿನಿ ಆರ್ಟ್ಸ್‌ ಲಾಂಛನದಡಿ ಎಸ್.ಎಚ್. ವಾಳ್ಕೆ ನಿರ್ಮಿಸಿರುವ ‘ಲೋಕಲ್ ಟ್ರೈನ್’ ಚಿತ್ರದಲ್ಲೂ ಕೃಷ್ಣ ಅವರೇ ನಾಯಕ. ಇದು ರೈಲಿನಲ್ಲಿ ನಡೆಯುವ ಕಥೆಯಂತೆ. ಲವ್‌ ಜೊತೆಗೆ ಕೃಷ್ಣ ಭರ್ಜರಿ ಆ್ಯಕ್ಷನ್‌ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧೆಡೆ 70 ದಿನಗಳ ಕಾಲ ಶೂಟಿಂಗ್‌ ನಡೆಸಲಾಗಿದೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಈ ತಿಂಗಳ ಅಂತ್ಯಕ್ಕೆ ಥಿಯೇಟರ್‌ಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ನಿರ್ಮಾಪಕ ಎಸ್.ಎಚ್. ವಾಳ್ಕೆ ಬರೆದಿರುವ ಕಥೆಗೆ ವೈ.ಎನ್‌. ರುದ್ರಮುನಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. ಚಿತ್ರದ ಐದು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಪಿ.ಆರ್. ಸೌಂದರ್ಯರಾಜ್ ಅವರ ಸಂಕಲನವಿದೆ. ರಾಜುಸುಂದರಂ ಮತ್ತು ಚಿನ್ನಿಪ್ರಕಾಶ್ ನೃತ್ಯ ನಿರ್ದೇಶಿಸಿದ್ದಾರೆ. ಪಳನಿರಾಜ್, ಚೆನ್ನೈ ರಮೇಶ್ ಅವರ ಸಾಹಸ ನಿರ್ದೇಶನವಿದೆ. ಕೇಶವಾದಿತ್ಯ, ಮಾರುತಿ ಟಿ. ಸಂಭಾಷಣೆ ಬರೆದಿದ್ದಾರೆ. 

ಮೀನಾಕ್ಷಿ ದೀಕ್ಷಿತ್ ಈ ಚಿತ್ರದ ನಾಯಕಿ. ಎಸ್ಟರ್ ನರೋನ, ಸುಚೇಂದ್ರಪ್ರಸಾದ್, ಸಾಧುಕೋಕಿಲ, ಚಿ. ಗುರುದತ್, ಮೈಸೂರು ಗೋಪಿ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು