ಗುರುವಾರ , ಡಿಸೆಂಬರ್ 3, 2020
18 °C

ವರ್ಷಾಂತ್ಯದಲ್ಲಿ ಲವ್‌ ಮಾಕ್ಟೇಲ್‌ -2 ತೆರೆಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈ ಬಾರಿ ಪ್ರೇಮಕಥೆ ಒಳಗೊಂಡ ಚಿತ್ರಗಳಲ್ಲಿ ಭಾರಿ ಸದ್ದು ಮಾಡಿದ ‘ಲವ್‌ ಮಾಕ್ಟೇಲ್‌ -2’ ಶೀಘ್ರ ಬಿಡುಗಡೆ ಆಗಲಿದೆ. 

‘ಲವ್‌ ಮಾಕ್ಟೇಲ್’‌ ಯಶಸ್ಸಿನಿಂದ ಸ್ಫೂರ್ತಿಗೊಂಡ ತಂಡ ಈಗ ಅದರ ಎರಡನೇ ಭಾಗ ಸಿದ್ಧಪಡಿಸುತ್ತಿದೆ. ಚಿತ್ರದ ಶೇ 60ರಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಈಗ ಸಂಕಲನ ನಡೆಯುತ್ತಿದೆ.  ಎಂದು ನಟ, ನಿರ್ದೇಶಕ ‘ಡಾರ್ಲಿಂಗ್’ ಕೃಷ್ಣ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.  

ಬೆಂಗಳೂರು, ಮೈಸೂರು ಭಾಗಗಳಲ್ಲಿ ಈಗಾಗಲೇ ಚಿತ್ರೀಕರಣ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷಾಂತ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ. 

ಮೊದಲ ಭಾಗದಲ್ಲಿದ್ದ ನಾಯಕ ‘ಆದಿ’ ಪಾತ್ರ ಹಾಗೇ ಇರಲಿದೆ. ಅವನ ಗೆಳೆಯರೂ ಈ ಭಾಗದಲ್ಲೂ ಇದ್ದಾರೆ. ಪ್ರೀತಿಗಾಗಿ ನಾಯಕನ ಪ್ರಯತ್ನ ಮುಂದುವರಿಯುತ್ತದೆ ಎಂದು ಅವರು ಕಥೆಯ ಎಳೆ ಹಂಚಿಕೊಂಡಿದ್ದಾರೆ. 

ನಾಯಕಿ ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ನಿರ್ಮಾಪಕರು ನಾಯಕಿಯ ಪಾತ್ರಕ್ಕೆ ಒಬ್ಬರನ್ನು ಆಯ್ಕೆ ಮಾಡಿದ್ದಾರೆ. ಮಲಯಾಳಂ ನಟಿ (ಬೆಂಗಳೂರು ಮೂಲದವರು) ರಾಶೆಲ್‌ ಡೇವಿಡ್‌ ಅವರ ಕಾಲ್‌ ಶೀಟ್‌ ಪಡೆದಿದ್ದಾರೆ ಎಂದು ತಂಡದ ಮೂಲಗಳು ಹೇಳಿವೆ.

ಚಿತ್ರಕ್ಕೆ ರಘು ದೀಕ್ಷಿತ್‌ ಅವರ ಸಂಗೀತವಿದೆ. ಚಿತ್ರ ಬಿಡುಗಡೆಯ ಬಳಿಕ ಕೃಷ್ಣ- ಮಿಲನ ಜೋಡಿ ಮದುವೆಯಾಗಲಿದೆ ಎಂದು ತಂಡ ಸುಳಿವು ನೀಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು