ಮಂಗಳವಾರ, ಡಿಸೆಂಬರ್ 7, 2021
24 °C

ಹಗರಣಗಳಿಂದ ದೂರ ಇರಿ: ಪ್ರಿಯಾಂಕಾ, ಆಲಿಯಾಗೆ ವಿವಾದಿತ ಸನ್ಯಾಸಿನಿಯ ಸಲಹೆ ಏಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಓಶೋ ಅವರ ಆಪ್ತ ಸಹಾಯಕಿಯಾಗಿದ್ದ ವಿವಾದಿತ ಸನ್ಯಾಸಿನಿ 'ಮಾ ಆನಂದ್‌ ಶೀಲಾ' ಅವರು ನಟಿಯರಾದ ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್‌ ಅವರಿಗೆ ಸಲಹೆಗಳನ್ನು ನೀಡಿದ್ದಾರೆ.

ಶೀಲಾ ಅವರ ಜೀವನ ಚರಿತ್ರೆಯನ್ನು ಆಧರಿಸಿ ತಯಾರಾಗುತ್ತಿರುವ ಎರಡು ಬೇರೆ ಬೇರೆ ಚಿತ್ರಗಳಲ್ಲಿ ಈ ನಟಿಯರಿಬ್ಬರು ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು.

ಹಿಂದೂಸ್ತಾನ್‌ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ವಿಚಾರವಾಗಿ ಕೇಳಿದ ಪ್ರಶ್ನೆಗೆ ಶೀಲಾ ಅವರು ಪ್ರತಿಕ್ರಿಯಿಸಿದ್ದಾರೆ.

'ಅವರು(ಪ್ರಿಯಾಂಕಾ ಮತ್ತು ಆಲಿಯಾ) ನನ್ನ ಪಾತ್ರದ ಬಗ್ಗೆ ಆಳವಾದ ಹುಡುಕಾಟವನ್ನು ನಡೆಸಬೇಕಾಗುತ್ತದೆ. ನನ್ನ ಬಗ್ಗೆ ಈ ಹಿಂದಿನಿಂದಲೂ ಕೇಳಿಬಂದಿರುವ ಹಗರಣಗಳನ್ನೇ ಚಿತ್ರಗಳಲ್ಲಿ ತೋರಿಸುವುದು ಬೇಡ. ಅವರು ಅದರಿಂದ ಸ್ವಲ್ಪ ದೂರ ಉಳಿಯಲಿ. ಅದು ಅವರಿಂದ ಸಾಧ್ಯವಿದೆಯೇ ಎಂಬುದು ನನಗೆ ಗೊತ್ತಿಲ್ಲ' ಎಂದು ಶೀಲಾ ಹೇಳಿದ್ದಾರೆ.

'ಒಂದು ವೇಳೆ ಈ ಇಬ್ಬರೂ ನಟಿಯರು ಕೇವಲ ಹಗರಣಗಳನ್ನು ತೋರಿಸಿದರೆ, ಅದು ನನ್ನ ಬಗೆಗಿನ ಚಿತ್ರವಲ್ಲ. ಅದು ಕೇವಲ ನನ್ನ ಕುರಿತು ಇರುವ ಊಹಾಪೋಹಗಳ ಬಗೆಗಿನ ಚಿತ್ರವೆಂದು ನಾನು ಭಾವಿಸುತ್ತೇನೆ' ಎಂಬುದಾಗಿ ಶೀಲಾ ತಿಳಿಸಿದ್ದಾರೆ.

ಓಶೋ ಅವರ ಆಪ್ತ ಸಹಾಯಕಿಯಾಗಿದ್ದ 'ಮಾ ಆನಂದ್‌ ಶೀಲಾ' ಅವರು ತಮ್ಮ ಜೀವನದಾದ್ಯಂತ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಬಂದವರು. ನೆಟ್‌ಪ್ಲಿಕ್ಸ್‌ನ 'ವೈಲ್ಡ್‌ ವೈಲ್ಡ್‌ ಕಂಟ್ರಿ'ಯಲ್ಲಿ ಕಾಣಿಸಿಕೊಂಡ ನಂತರ ಮಾ ಆನಂದ್‌ ಶೀಲಾ ಅವರು ಹೆಚ್ಚು ಪ್ರಚಾರಕ್ಕೆ ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು