ಸೋಮವಾರ, ಜುಲೈ 4, 2022
24 °C

Maaran Trailer: ಮಾರನ್ ಟ್ರೈಲರ್ ಬಿಡುಗಡೆ: ತನಿಖಾ ಪತ್ರಕರ್ತನಾಗಿ ಧನುಷ್ ಮಿಂಚು

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಧನುಷ್ ತನಿಖಾ ಪತ್ರಕರ್ತನ ಪಾತ್ರದಲ್ಲಿ ನಟಿಸುತ್ತಿರುವ ಆ್ಯಕ್ಷನ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿರುವ ‘ಮಾರನ್’ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಧನುಷ್ ಪಾತ್ರದ ಬಗ್ಗೆ ಸಿನಿಮಾ ಪ್ರೇಮಿಗಳಿಗೆ ಕುತೂಹಲ ಹುಟ್ಟುವಂತೆ ಮಾಡಿದೆ.

ಮಂಗಳವಾರ ಡಿಸ್ನಿ+ಹಾಟ್‌ಸ್ಟಾರ್‌ ಯೂಟ್ಯೂಬ್ ಚಾನೆಲ್‌ನಲ್ಲಿ ಟ್ರೈಲರ್ ಬಿಡುಗಡೆಯಾಗಿದೆ. ಮಾರ್ಚ್ 11 ರಂದು ನೇರವಾಗಿ ಡಿಸ್ನಿ+ಹಾಟ್‌ಸ್ಟಾರ್‌ ಓಟಿಟಿಯಲ್ಲಿ ಮಾರನ್ ಕನ್ನಡ. ತೆಲುಗು, ತಮಿಳು, ಮಲೆಯಾಳಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಧನುಷ್ ಈ ಚಿತ್ರದಲ್ಲಿ ತನಿಖಾ ಪತ್ರಕರ್ತನಾಗಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಧನುಷ್‌ಗೆ ಜೊತೆಯಾಗಿ ನಟಿ ಮಾಳವಿಕಾ ಮೋಹನನ್ ನಟಿಸಿದ್ದು, ಸಮುದ್ರಕಣಿ, ಸ್ಮೃತಿ ವೆಂಕಟ್, ಕೃಷ್ಣಕುಮಾರ್ ಬಾಲಸುಬ್ರಮಣಿಯನ್ ಹಾಗೂ ಮಹೇಂದ್ರನ್ ಅವರ ತಾರಾಗಣವಿದೆ.

ಸಿನಿಮಾವನ್ನು ಕಾರ್ತಿಕ್ ನರೇನ್ ನಿರ್ದೇಶಿಸಿದ್ದು, ಸತ್ಯಜ್ಯೋತಿ ಫಿಲ್ಮಂ ಬ್ಯಾನರ್ ಅಡಿ ಟಿ.ಜಿ ತ್ಯಾಗರಾಜನ್ ನಿರ್ಮಾಣ ಮಾಡಿದ್ದಾರೆ. ಧನುಷ್ ಅಭಿನಯದ ‘ಅತ್ರಂಗಿ ರೇ’ ಸಿನಿಮಾ ಕೂಡ ನೇರವಾಗಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು