ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಭಾಷೆಗಳಲ್ಲಿ ‘ಮಡ್ಡಿ’; ಮಡ್‌ ರೇಸ್‌ ಹಿನ್ನೆಲೆಯ ಮೊದಲ ಚಿತ್ರ!

Last Updated 9 ಡಿಸೆಂಬರ್ 2021, 20:00 IST
ಅಕ್ಷರ ಗಾತ್ರ

ಮಡ್‌ ರೇಸ್‌ ಕಥೆಯನ್ನಿಟ್ಟುಕೊಂಡು ಡಿ. 10ರಂದು ಆರು ಭಾಷೆಗಳಲ್ಲಿ ತೆರೆ ಕಾಣುತ್ತಿದೆ ‘ಮಡ್ಡಿ’.ಮಲಯಾಳಂ, ತಮಿಳು, ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬಂದಿದೆ ಈ ಚಿತ್ರ. ದೇಶದಲ್ಲಿ ಮಡ್‌ ರೇಸ್‌ ಹಿನ್ನೆಲೆಯಿಟ್ಟುಕೊಂಡು ಮಾಡಿದ ಮೊದಲ ಚಿತ್ರವಿದು ಎಂದಿದೆ ಚಿತ್ರತಂಡ.

ಡಾ.ಪ್ರಗ್ಬಲ್ ಅವರು ಈ ಚಿತ್ರದ ಕಥೆ ಬರೆದು ನಿರ್ದೇಶಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ. ಸಂಗೀತ ಸಿದ್ಧಪಡಿಸಲು ರವಿ ಅವರಿಗೆ ಎರಡು ವರ್ಷ ಬೇಕಾಯಿತಂತೆ.

‘ತಮಿಳುನಾಡು ಹಾಗೂ ‌ಕೇರಳ ಗಡಿ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ನೂತನ ಕಲಾವಿದರ ಹಾಗೂ ನುರಿತ ತಂತ್ರಜ್ಞರ ಸಮಾಗಮದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ’ ಎಂದರು ನಿರ್ದೇಶಕ ಡಾ.ಪ್ರಗ್ಬಲ್.

ಪ್ರೇಮಕೃಷ್ಣ ದಾಸ್ ಅವರು ನಿರ್ಮಾಪಕರು. ರತೀಶ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಹಾಗೂ ರನ್ ರವಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಯವನ್ ಕೃಷ್ಣ, ರಿಧಾನ್ ಕೃಷ್ಣ, ಅಮಿತ್ ಶಿವದಾಸ್, ಅನುಶಾ ಸುರೇಶ್, ರೆಂಜಿ ಪಣಿಕರ್, ಹರೀಶ್ ಪೆರಾಡಿ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT