ಬುಧವಾರ, ಮಾರ್ಚ್ 22, 2023
25 °C

‘ರೆಡ್‌ರಮ್‌’ನಲ್ಲಿ ಮಧುರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ ಮಲೆನಾಡಿನ ಮತ್ತೊಬ್ಬ ಕುವರಿ. ಕುಶಾಲನಗರದ ಮಧುರಾಗೌಡ ಈಗ ಬೆಳ್ಳಿತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ರೆಡ್‌ರಮ್‌ ಅವರು ನಟಿಸುತ್ತಿರುವ ಚಿತ್ರ. ಹೊಸ ಸುದ್ದಿ ಏನೆಂದರೆ ಮಧುರಾ ಅವರಿಗೆ ಬಹುತಾರಾಗಣದ ಚಿತ್ರವೊಂದರಲ್ಲಿಯೂ ಅವಕಾಶ ಬಂದಿದೆಯಂತೆ. ಚಿತ್ರಕ್ಕೆ ಇನ್ನೂ ಹೆಸರಿಡಬೇಕಿದೆ. ಜೊತೆಗೆ ಹೊಸ ಚಿತ್ರಗಳ ಕಥೆಗಳನ್ನೂ ಕೇಳುತ್ತಿದ್ದಾರೆ ಅವರು. 

ಮಧುರಾ ಅವರಿಗೆ ಗ್ಲಾಮರ್‌ ಲೋಕ ಹೊಸದಲ್ಲ. ಮಾಡೆಲಿಂಗ್ ಹಾಗೂ ಅಭಿನಯ ಕ್ಷೇತ್ರದಲ್ಲಿ ತರಬೇತಿ ಪಡೆದಿದ್ದಾರೆ. ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ಫಿಲಂಸ್ ಲಾಂಛನದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರೆಡ್‌ರಮ್‌ ಚಿತ್ರ ಅವರ ನಟನಾ ಸಾಮರ್ಥ್ಯ ತೋರಿಸಲು ವೇದಿಕೆ ಕೊಟ್ಟಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು