ಸೋಮವಾರ, ಆಗಸ್ಟ್ 8, 2022
21 °C
ಏಳನೆಯ ರಾಜಸ್ಥಾನ ಅಂತರಾಷ್ಟ್ರೀಯ ಚಿತ್ರೋತ್ಸವ

‘ಮಡಿ’ಗೆ ಬೆಸ್ಟ್‌ ಗ್ಲೋಬಲ್ ಸೋಷಿಯಲ್ ಅವೇರ್‌ನೆಸ್‌ ಫಿಲ್ಮ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಧೀರ್‌ ಅತ್ತಾವರ ನಿರ್ದೇಶನದ ‘ಮಡಿ’ ಚಿತ್ರವು ರಾಜಸ್ಥಾನ 7ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಮಾಜಿಕ ಜಾಗೃತಿಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಇದೇ ಚಿತ್ರದ ನಿರ್ದೇಶಕ ಸುಧೀರ್‌ ಅತ್ತಾವರ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.

ಚಿತ್ರೋತ್ಸವದಲ್ಲಿ ಅಮೆರಿಕದ ಚಿತ್ರ ‘ಫಲಾಫೆಲ್‌’, ಫ್ರೆಂಚ್‌ ಸಿನಿಮಾ ‘ಸೊಲೇ ಮಿಯೋ’ ತೀವ್ರ ಸ್ಪರ್ಧೆ ಒಡ್ಡಿದ್ದವು. ಆದರೆ ‘ಮಡಿ’ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು.

ಸಕ್ಸಸ್ ಫಿಲ್ಮ್ಸ್‌ ಬ್ಯಾನರ್ ಅಡಿ ವಿದ್ಯಾಧರ್ ಶೆಟ್ಟಿ ಮತ್ತು ಸೂರಜ್ ನ್ಯೂ‌ನ್ಸ್ ಈ ಚಿತ್ರ ನಿರ್ಮಿಸಿದ್ದಾರೆ. ಕರಾವಳಿಯ ಭಾಗದ ಜನಪದ ಕಲೆ 'ಆಟಿ ಕಳಂಜ'ದ ಹಿನ್ನೆಲೆಯ ಕಥೆಯುಳ್ಳ ಚಿತ್ರ ‘ಮಡಿ’. ಜೋಧ್‌ಪುರದ ಮಹ್ರಂಗಾಹ್ರ್‌ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆದಿದೆ. ಚಿತ್ರೋತ್ಸವದಲ್ಲಿ ದೇಶ ವಿದೇಶಗಳ 40ಕ್ಕೂ ಅಧಿಕ ಕಿರು ಚಿತ್ರಗಳು ಭಾಗವಹಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು