ಭಾನುವಾರ, ಜೂನ್ 13, 2021
22 °C

ಮಲೈಕಾ, ಶಿಲ್ಪಾಶೆಟ್ಟಿ ಮಾದಕ ಅಮ್ಮಂದಿರು ಎಂದ ಮ್ಯಾಗಜೀನ್: ಸಿನಿಮಾ ನಿರ್ದೇಶಕ ಕಿಡಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Malaika arora and Shilpa Shetty kundra

ಮುಂಬೈ: ಬಾಲಿವುಡ್ ನಟಿಯರಾದ ಮಲೈಕಾ ಅರೋರಾ ಮತ್ತು ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಚಿತ್ರವನ್ನು ಹಂಚಿಕೊಂಡಿರುವ ಸಿನಿಮಾ ಮ್ಯಾಗಜೀನ್‌ವೊಂದು ಬಾಲಿವುಡ್‌ನ 'ಅಮ್ಮಂದಿರಲ್ಲಿ ಅತ್ಯಂತ ಮಾದಕ' ಎಂದಿರುವುದನ್ನು ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ನನ್ನ ಪ್ರಕಾರ ಇದು ಮೂರ್ಖತನ, ಇದು ನಿಲ್ಲಬೇಕು. ಮಾದಕ ತಾಯಿ ಎಂದರೇನು?. ನೀವು ದೇಹದ ರಚನೆಯನ್ನು ಆಧರಿಸಿ ತಾಯಂದಿರ ನಡುವೆ ವರ್ಗವನ್ನು ಸೃಷ್ಟಿಸಿದರೆ ಅದು ಸ್ತ್ರೀವಾದಕ್ಕೆ ಹಾನಿಯನ್ನುಂಟು ಮಾಡುತ್ತದೆ. ನಾಚಿಕೆಗೇಡು' ಎಂದು ಗರಂ ಆಗಿದ್ದಾರೆ.

ನಿನ್ನೆ ಟ್ವೀಟ್ ಮಾಡಿದ್ದ ಫಿಲ್ಮ್‌ಫೇರ್, ಮಲೈಕಾ ಅರೋರಾ ಮತ್ತು ಶಿಲ್ಪಾ ಶೆಟ್ಟಿ ಕುಂದ್ರಾ ಅವರಿದ್ದ ಫೊಟೊದೊಂದಿಗೆ, ನಟಿಯರಿಬ್ಬರು ಬಾಲಿವುಡ್‌ನ ಅಮ್ಮಂದಿರಲ್ಲಿ ಅತ್ಯಂತ ಮಾದಕ ಎಂದು ಬರೆದುಕೊಂಡಿತ್ತು. 

ಇದನ್ನು ರೀಟ್ವೀಟ್ ಮಾಡಿರುವ ರಂಜನ್ ಅಗ್ನಿಹೋತ್ರಿ, ಫಿಲಂಫೇರ್ ವಿರುದ್ಧ ಕಿಡಿಕಾರಿದ್ದಾರೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಹಲವರು ಅಗ್ನಿಹೋತ್ರಿ ಅವರನ್ನು ಬೆಂಬಲಿಸಿದ್ದು, ಮಸಾಲಾಗಾಗಿ ಕೆಲವು ಅಂತಹ ಮ್ಯಾಗ್‌‌ಜೀನ್‌ಗಳು ಮತ್ತು ವರದಿಗಾರರು ಯಾವುದೇ ರೀತಿಯ ಕೆಳಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂದಿದ್ದಾರೆ.

ಬಾಲಿವುಡ್‌ನಿಂದ ನೀವು ಏನನ್ನು ನಿರೀಕ್ಷಿಸುತ್ತೀದ್ದೀರಿ... ಈಗ ಬಾಲಿವುಡ್‌ನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಅಗತ್ಯವಿದೆ ಎಂದು ವಿಶಾಲ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಟ್ವೀಟಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು