ಭಾನುವಾರ, ಜುಲೈ 3, 2022
23 °C

ಮರೆಯಾದ ಮಹಾಭಾರತದ ‘ಇಂದ್ರ’: ನಟ ಸತೀಶ್ ಕೌಲ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹಾಭಾರತ ಧಾರಾವಾಹಿಯಲ್ಲಿ ಇಂದ್ರನ ಪಾತ್ರದಲ್ಲಿ ಅಭಿನಯಿಸಿದ ಖ್ಯಾತಿಯ ಹಿರಿಯ ನಟ ಸತೀಶ್ ಕೌಲ್ (74) ಶನಿವಾರ ಲುಧಿಯಾನದಲ್ಲಿ ಕೊರೋನಾ ಸೋಂಕಿನಿಂದ ಅನಾರೋಗ್ಯಕ್ಕೊಳಗಾಗಿ ನಿಧನರಾದರು.

70ರ ದಶಕದಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ಸುಮಾರು 300 ಪಂಜಾಬಿ ಹಾಗೂ ಹಿಂದಿ ಚಿತ್ರಗಳು ಹಾಗೂ ಟಿವಿ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ರಾಮ್ ಲಖನ್’, ‘ಪ್ಯಾರ್ ತೋಹ್ ಹೊನಾ ಹಿ ಥಾ’ ಮತ್ತು ‘ಆಂಟಿ ನಂ 1’ ಅವರು ನಟಿಸಿದ ಪ್ರಮುಖ ಹಿಂದಿ ಚಿತ್ರಗಳು. ‘ಮೌಲಾ ಜಾಟ್’, ‘ಸಾಸ್ಸಿ ಪುನ್ನು’, ‘ಇಷ್ಕ್ ನಿಮಾನಾ’, ‘ಸುಹಾಗ್ ಚೂಡಾ’ ಮತ್ತು ‘ಪಟೋಲಾ’ ಅವರು ನಟಿಸಿದ ಪ್ರಮುಖ ಹಿಂದಿ ಚಿತ್ರಗಳು. ದೂರದರ್ಶನದ ಮಹಾಭಾರತ ಧಾರಾವಾಹಿಯಲ್ಲಿ ಇಂದ್ರನ ಪಾತ್ರ ನಿರ್ವಹಿಸಿದ್ದರು. ಚಿಕ್ರಮ ಮತ್ತು ಬೇತಾಳ ಧಾರಾವಾಹಿಯಲ್ಲೂ ಅವರ ಪ್ರಮುಖ ಪಾತ್ರ ಗಮನ ಸೆಳೆದಿತ್ತು.

ಸಂತಾಪ: ಕೌಲ್ ಅವರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು