ಹೈದರಾಬಾದ್: ನವೆಂಬರ್ 22ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಬಹುನಿರೀಕ್ಷಿತ ಹಾಲಿವುಡ್ ಸಿನಿಮಾ ‘ಫ್ರೋಜನ್ 2’ ತೆಲುಗು ಅವತರಣಿಕೆಯಲ್ಲಿ ಪ್ರಿನ್ಸ್ ಮಹೇಶ್ ಬಾಬು ಮಗಳು ಸಿತಾರಾ ಬೇಬಿ ಎಲ್ಸಾ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಈ ಮೂಲಕ ಟಾಲಿವುಡ್ಗೆ ಪರಿಚಿತಳಾಗಲಿರುವ ಸಿತಾರಾ ಕುರಿತು ಪ್ರಿನ್ಸ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಬೇಲಿ ಎಲ್ಸಾ ಪಾತ್ರಕ್ಕೆ ಸಿತಾರಾ ತೆಲುಗಿನಲ್ಲಿ ಕಂಠದಾನ ಮಾಡಿದ್ದಾರೆ.ಇದೇ ಪಾತ್ರದ ವಯಸ್ಕ ಪಾತ್ರಕ್ಕೆ ಬಹುಭಾಷಾ ನಟಿ ನಿತ್ಯಾ ಮೆನನ್ ವಾಯ್ಸ್ ಡಬ್ ಮಾಡಿದ್ದಾರೆ. ಹಿಂದಿಯಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ಪರಿಣಿತಿ ಚೋಪ್ರಾ ಕಂಠದಾನ ಮಾಡಿದ್ದು, ತಮಿಳು ಅವತರಣಿಕೆಗೆ ಶ್ರುತಿ ಹಾಸನ್ ಧ್ವನಿಯಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ನಟ ಮಹೇಶ್ ಬಾಬು, "ಅವಳು ನಿಜವಾಗಿಯೂ ರಾಣಿ ಎಲ್ಸಾಳ ಚಿಕ್ಕ ಆವೃತ್ತಿಯಾಗಿದ್ದಾಳೆ! ಆತ್ಮವಿಶ್ವಾಸ, ಮಾಂತ್ರಿಕತೆ ಮತ್ತು ಪರಿಶುದ್ಧತೆಯ ಪ್ರತೀಕ. ನಿನ್ನ ಬಗ್ಗೆ ಹೆಮ್ಮೆಯಾಗುತ್ತಿದೆ ಸಿತು ಪಾಪು! ಫ್ರೋಜನ್ 2 ತೆಲುಗು ಅವತರಣಿಕೆ ಬಿಡುಗಡೆಗಾಗಿ ಕಾಯುತ್ತಿರುವೆ ಎಂದುಬರೆದುಕೊಂಡಿದ್ದಾರೆ.

ಸಿತಾರಾಳ ಈ ಸಾಧನೆಯನ್ನುಮಹೇಶ್ಬಾಬು ಟ್ವಿಟರ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದುಮೆಚ್ಚುಗೆಗೆ ಕಾರಣವಾಗಿದೆ.

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಸಿತಾರಾ ತನ್ನ ತಾಯಿ ನಮ್ರತಾ ಶಿರೋದ್ಕರ್ ಅವರೊಂದಿಗೆ ಕಾಣಿಸಿಕೊಂಡಿದ್ದಳು ಮತ್ತು ತನ್ನ ಹೊಸ ಅನುಭವದ ಕುರಿತು ಮಾತನಾಡಿದ್ದಳು. ಎಲ್ಸಾ ನನ್ನ ಇಷ್ಟದ ಕಾರ್ಟೂನ್ ಪಾತ್ರ. ಈ ವಿಚಾರವನ್ನು ನನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೇನೆ ಮತ್ತು ಅವರಲ್ಲಿ ಕೆಲವರೊಂದಿಗೆ ಚಿತ್ರ ವೀಕ್ಷಿಸಲಿದ್ದೇನೆ ಎಂದು ಹೇಳಿದ್ದಳು. ಅಲ್ಲದೆ ತನ್ನ ಯುಟ್ಯೂಬ್ ಚಾನಲ್ನಲ್ಲಿಯೂ ಫ್ರೋಜನ್ ಮತ್ತು ಅದರ ಪಾತ್ರಗಳ ಕುರಿತಾಗಿ ವಿಡಿಯೋ ಶೇರ್ ಮಾಡಿದ್ದಾಳೆ.

ವಾಲ್ಟ್ ಡಿಸ್ನಿ ಅನಿಮೇಷನ್ ಸ್ಟುಡಿಯೋ ಹಾಗೂ ವಾಲ್ಟ್ ಡಿಸ್ನಿ ಪಿಕ್ಚರ್ಸ್ ಸಂಸ್ಥೆಯಡಿ ಪೀಟರ್ ಡೆಲ್ ವೆಚೊ ನಿರ್ಮಾಣದಲ್ಲಿ ಅನಿಮೇಟೆಡ್ ಸಿನಿಮಾ ಫ್ರೋಜನ್ 2 ನಿರ್ಮಾಣಗೊಂಡಿದೆ. 2013ರಲ್ಲಿ ಕ್ರಿಸ್ ಬಕ್ ಹಾಗೂ ಜೆನ್ನಿಫರ್ ಲೀ ನಿರ್ದೇಶಿಸಿದ್ದ ‘ಫ್ರೋಜನ್’ ತೆರೆಕಂಡಿತ್ತು. ಅದರ ಮುಂದುವರಿದ ಭಾಗವೇ ‘ಫ್ರೋಜನ್ 2’.

ನವೆಂಬರ್ 22ರಂದು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಅವತರಣಿಕೆಯಲ್ಲಿ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.