ಶುಕ್ರವಾರ, ಜೂನ್ 18, 2021
23 °C

ಬಿಡುಗಡೆಯ ಹೊಸ್ತಿಲಿನಲ್ಲಿ ‘ಮಹಿಷಾಸುರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉದಯ್ ಪ್ರಸನ್ನ ನಿರ್ದೇಶನದ ‘ಮಹಿಷಾಸುರ’ ಚಿತ್ರಕ್ಕೆ ಕರ್ನಾಟಕ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕೃತ ಮಂಡಳಿಯು  ಯು/ಎ ಅರ್ಹತಾ ಪ್ರಮಾಣ ಪತ್ರ ನೀಡಿದೆ.

ಅರ್ಜುನ್, ಬಿಂದು ಹಾಗೂ ಮಂಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನ ‘ಅಸುರನ್’ ಚಿತ್ರದಂತೆ ಈ ಚಿತ್ರ ಕೂಡ ಸಿನಿಪ್ರಿಯರ ಹೃದಯ ಗೆಲ್ಲಲಿದೆ ಎನ್ನುವುದು ಚಿತ್ರತಂಡದ ನಿರೀಕ್ಷೆ.

ಇದೇ 15ರಂದು ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯನ್ನೂ ಹಾಕಿಕೊಂಡಿದೆ. ಚಿತ್ರಮಂದಿರಗಳ ಬಾಗಿಲು ಪುನಾ ತೆರೆಯುವುದನ್ನು ಚಿತ್ರತಂಡ ಎದುರು ನೋಡುತ್ತಿದೆ.

‘ಮೆಳೇಕೋಟೆ ಟೂರಿಂಗ್ ಟಾಕೀಸ್’ ಹಾಗೂ ‘ಮೈತ್ರಿ ಪ್ರೊಡಕ್ಷನ್’ ಸಹಯೋಗದಲ್ಲಿ ಚಿತ್ರ ನಿರ್ಮಿಸಲಾಗಿದೆ.

‘ಮಹಿಷಾಸುರ’ ಚಿತ್ರ ಪೂರ್ಣಗೊಳಿಸಿದ ಖುಷಿಯಲ್ಲಿ ನಿರ್ದೇಶಕ ಉದಯ್ ಪ್ರಸನ್ನ, ಎರಡನೇ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲು ಅಣಿಯಾಗಿದ್ದಾರೆ. ಅವರ ನಿರ್ದೇಶನದ ಎರಡನೆ ಚಿತ್ರ ‘ಬೆಣ್ಣೆಗುಲ್ಕನ್’. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರವಾಗಿ ಮಾಡುವ ದೊಡ್ಡ ಯೋಜನೆ ಅವರದು. ಚಿತ್ರದ ಕಥಾವಸ್ತು ಮತ್ತು ನಿರೂಪಣೆ ವಿಭಿನ್ನವಾಗಿರಲಿದ್ದು, ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವುದು ಅವರ ವಿಶ್ವಾಸದ ನುಡಿ.

‘ದೀಕ್ಷಾ ಸಮೂಹ’ ಹಾಗೂ ‘ಮೆಳೇಕೋಟೆ ಟೂರಿಂಗ್ ಟಾಕೀಸ್’ ಬ್ಯಾನರ್‌ನಲ್ಲಿ ಚಿತ್ರ ಮೂಡಿ ಬರಲಿದ್ದು, ಚಿತ್ರತಂಡವು ಕಲಾವಿದರ ಅನ್ವೇಷಣೆಯಲ್ಲಿ ತೊಡಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.