ಶುಕ್ರವಾರ, ಜನವರಿ 24, 2020
20 °C

ಹೊಸ ವರ್ಷಕ್ಕೆ ಮಲೈಕಾ ಹಾಟ್‌ ಫೋಟೊ ಶೂಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಯ್ಯಾ ಚಯ್ಯಾ ಹುಡುಗಿ ಮಲೈಕಾ ಅರೋರಾ ಹಾಟ್‌, ಹಾಟ್‌ ಫೋಟೊಶೂಟ್‌ನೊಂದಿಗೆ ಹೊಸ ವರ್ಷಕ್ಕೆ ಅಡಿ ಇಡುತ್ತಿದ್ದಾರೆ. ಹೊಸ ಅವತಾರಗಳಿಂದ ಆಗಾಗ ಎಲ್ಲರಿಗೂ ಶಾಕ್‌ ನೀಡುವ ಮಲೈಕಾ ಅವರ ಹೊಸ ಗ್ಲಾಮರ್‌ ಲುಕ್‌ ನೋಡುವವರ ಎದೆ ಬಡಿತ ಹೆಚ್ಚಿಸಿ, ಚಳಿಗಾಲದಲ್ಲೂ ಬೆವರುವಂತಿದೆ. 

ಪಾರದರ್ಶಕ ಮತ್ತು ಬಿಕನಿಗಳು ಮಲೈಕಾಗೆ ಹೊಸದಲ್ಲ. ಹಾಗೆಯೇ ಹೊಸ ಫ್ಯಾಶನ್‌ ಟ್ರೆಂಡ್‌ ಸೆಟ್ಟರ್‌ನಲ್ಲಿ ಈ ಬೆಡಗಿ ಮುಂಚೂಣಿಯಲ್ಲಿದ್ದಾರೆ. ಪಾರದರ್ಶಕ ಮಿನಿ ಡ್ರೆಸ್‌ನಲ್ಲಿ ದೆಹಸಿರಿಯನ್ನು ತೆರೆದಿಟ್ಟಿರುವ 45 ವರ್ಷದ ಮಲೈಕಾ ಹಾಟ್‌, ಹಾಟ್‌ ಫೋಟೊಗಳನ್ನು ಆಕೆಯ ಸ್ಟೈಲಿಸ್ಟ್‌ ಮನೇಕಾ ಹರಿಸಿಂಗಾನಿ ಇನ್‌ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ.

ಸೆಕ್ವಿನ್‌ ಕುಸುರಿ, ಟ್ರೆಂಡಿ ಬಿಷಪ್‌ ಸ್ಲೀವ್ಸ್‌ ಮತ್ತು ಡೀಪ್‌ ನೆಕ್‌ ಇರುವ ಬೀಗಿ ಡ್ರೆಸ್‌ ಮಲೈಕಾ ಬಳಕುವ ದೇಹಸಿರಿಯ ಅಂದವನ್ನು ಹೆಚ್ಚಿಸಿದೆ.  ಬೀಗಿ ಡ್ರೆಸ್‌ಗೆ ಒಪ್ಪುವಂತೆ ಕಂದು ಬಣ್ಣದ ಲಿಪ್‌ಸ್ಟಿಕ್‌ ಮತ್ತು ಹೆಡ್‌ಬ್ಯಾಂಡ್‌ ಮಲೈಕಾ ಅಂದವನ್ನು ಇಮ್ಮಡಿಗೊಳಿಸಿವೆ. 

ಮಗುವಿನ ಜತೆ ಆಂಟಿ!: ಕಾಲೆಳೆದ ನೆಟ್ಟಿಗರು 

ತಾಯಿಯ ಮನೆಯಲ್ಲಿ ಕ್ರಿಸ್‌ಮಸ್‌ ಆಚರಣೆ ವೇಳೆ ಬಾಯ್‌ಫ್ರೆಂಡ್‌ ಅರ್ಜುನ್‌ ಕಪೂರ್‌ ಕೆನ್ನೆಗೆ ಮುತ್ತಿಕ್ಕಿದ ಚಿತ್ರವನ್ನು ಮಲೈಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸೂರ್ಯ, ತಾರೆ, ಬೆಳಕು, ಸಂತೋಷ ಮತ್ತು ಹೊಸ ವರ್ಷ’ ಎಂದು ಅಡಿ ಬರಹ ಬರೆದಿದ್ದರು.ಆದರೆ, ನೆಟ್ಟಿಗರು ಮಲೈಕಾ ಕಾಲೆಳೆದಿದ್ದಾರೆ. ‘ಬಚ್ಚಾ ವಿದ್‌ ಆಂಟಿ’ ‘ಡೈವೋರ್ಸ್‌ ಪರಿಣಾಮ’ ‘ವಿವೇಕ್‌ ಒಬೇರಾಯ್‌ ಅವರಿಂದ ಪಾಠ ಕಲಿತವೇ ಅರ್ಜುನ್‌ ಕಪೂರ್‌’ ಎಂದು ತಮಾಷೆ ಮಾಡಿದ್ದಾರೆ.

ಸೈಫ್‌ ಅಲಿ ಖಾನ್‌ ಮತ್ತು ಕರೀನಾ ಕಪೂರ್‌ ಏರ್ಪಡಿಸಿದ್ದ ಔತಣಕೂಟಕ್ಕೂ ಜತೆಯಾಗಿಯೇ ಹಾಜರಾಗಿದ್ದರು. ಮುಂಬೈನಲ್ಲಿ ಇತ್ತೀಚೆಗೆ ತಮ್ಮ ಸಂಬಂಧವನ್ನು ಇಬ್ಬರೂ ಅಧಿಕೃತವಾಗಿ ಘೋಷಿಸಿದ ನಂತರ ಮೊದಲ ಬಾರಿಗೆ ಈ ಜೋಡಿ ಪಾರ್ಟಿಗೆ ಹಾಜರಾಗಿತ್ತು. ಲವ್‌ಬರ್ಡ್ಸ್‌ 2020ರಲ್ಲಿ ಮದುವೆಯಾಗುವ ಸುಳಿವು ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು