ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Yudhra ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಗಮನ ಸೆಳೆದ ಮಾಳವಿಕಾ ಔಟ್‌ಫಿಟ್!

ಯುವ ನಟ ಸಿದ್ಧಾಂತ್ ಚತುರ್ವೇಧಿ ಮುಖ್ಯಪಾತ್ರದಲ್ಲಿರುವ ಯುಧ್ರಾ ಹಿಂದಿ ಸಿನಿಮಾ ಸೆಪ್ಟೆಂಬರ್ 20ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
Published 30 ಆಗಸ್ಟ್ 2024, 12:55 IST
Last Updated 30 ಆಗಸ್ಟ್ 2024, 12:55 IST
ಅಕ್ಷರ ಗಾತ್ರ

ಬೆಂಗಳೂರು: ‘ಯುಧ್ರಾ’ (Yudhra) ಸಿನಿಮಾ ಮೂಲಕ ತಮಿಳು ನಟಿ ಮಾಳವಿಕಾ ಮೋಹನನ್ ಬಾಲಿವುಡ್‌ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಲು ಸಿದ್ದವಾಗಿದ್ದಾರೆ.

ಯುವ ನಟ ಸಿದ್ಧಾಂತ್ ಚತುರ್ವೇಧಿ ಮುಖ್ಯಪಾತ್ರದಲ್ಲಿರುವ ಯುಧ್ರಾ ಹಿಂದಿ ಸಿನಿಮಾ ಸೆಪ್ಟೆಂಬರ್ 20ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಆಕ್ಷನ್, ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿರುವ ಈ ಸಿನಿಮಾವನ್ನು ಫರ್ಹಾನ್ ಅಖ್ತರ್, ರಿತೇಶ್ ಸಿದ್ದವಾನಿ ಎಕ್ಸೆಲ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ.

ಅಂದಹಾಗೇ ಈ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ಮಾಳವಿಕಾ ಅವರ ಔಟ್‌ಫಿಟ್ ಭಾರಿ ಗಮನ ಸೆಳೆದಿದೆ.

ಮಾಳವಿಕಾ ಮೋಹನನ್ ಈ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಯುಧ್ರಾ ಸಿನಿಮಾವನ್ನು ರವಿ ಉದ್ಯಾವರ್ ಅವರು ನಿರ್ದೇಶಿಸಿದ್ದಾರೆ. ಯುವ ನಟ ಸಿದ್ಧಾಂತ್ ಚತುರ್ವೇಧಿ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗೆಯೇ ಬಾಲಿವುಡ್‌ನಲ್ಲಿ ಮೋಡಿ ಮಾಡಲು ಮಾಳವಿಕಾ ಸಹ ತಯಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT