ಚಂದನವನದಲ್ಲಿ ಸೈನ್ಸ್ ಫಿಕ್ಷನ್ ಜಾನರ್‌ನ ಸಿನಿಮಾಗಳು ಬಂದಿರುವುದು ಬೆರಳೆಣಿಕೆಯಷ್ಟೇ. ಆ್ಯಕ್ಷನ್, ಲವ್‌ಸ್ಟೋರಿ ಸಿನಿಮಾಗಳ ನಡುವೆ ಕುತೂಹಲಕಾರಿಯಾದ ಕಥೆಯೊಂದನ್ನು ಹೊತ್ತು ಬಂದಿದೆ ‘ಮಂಡಲ’. ಅಜಯ್ ಸರ್ಪೇಷ್ಕರ್ ನಿರ್ದೇಶನದ ಚೊಚ್ಚಲ ಚಿತ್ರ, ಸೈನ್ಸ್ ಫಿಕ್ಷನ್ ಕಂಥಾಹಂದರದ ‘ಮಂಡಲ’ ಮಾರ್ಚ್ 10ರಂದು ತೆರೆಕಾಣಲಿದೆ. ಅನಂತನಾಗ್, ಪ್ರಕಾಶ್ ಬೆಳವಾಡಿ, ಕಿರಣ್ ಶ್ರೀನಿವಾಸ್, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲಕಾರಿ ಅಂಶಗಳು ಇದರಲ್ಲಿವೆ. ಈ ಸಿನಿಮಾಗೆ ಪ್ರಕಾಶ್ ಬೆಳವಾಡಿ ಹಾಗೂ ಅಜಯ್ ಚಿತ್ರಕಥೆ ರಚಿಸಿದ್ದಾರೆ.

ಚಿತ್ರದ ನಾಯಕಿ ಶರ್ಮಿಳಾ ಮಾಂಡ್ರೆ, ‘ಮಾಯಾ’ ಎಂಬ ಏರೋಸ್ಪೇಸ್ ಎಂಜಿನಿಯರ್ ಪಾತ್ರ ಮಾಡಿದ್ದಾರೆ. ಈಕೆ ಅನ್ಯಗ್ರಹ ಜೀವಿಗಳಿಂದ(ಏಲಿಯನ್ಸ್) ಅಪಹರಿಸಲ್ಪಟ್ಟ ಬಳಿಕ ನಡೆಯುವ ಘಟನೆಗಳೇ ಚಿತ್ರದ ಕಥಾಹಂದರ. ‘ನಾನು ಹೆಚ್ಚಾಗಿ ಈ ಜಾನರ್‌ನ ಸಿನಿಮಾಗಳನ್ನು ವೀಕ್ಷಿಸುತ್ತೇನೆ. ಆದರೆ ಕನ್ನಡದಲ್ಲಿ ಯಾಕೆ ಈ ಮಾದರಿ ಸಿನಿಮಾಗಳು ಬರುತ್ತಿಲ್ಲ ಎಂದು ಯೋಚಿಸುತ್ತಿದ್ದೆ. ಆ ಸಮಯದಲ್ಲಿ ಸಿಕ್ಕ ಸಿನಿಮಾವಿದು. ಇದೊಂದು ಗಂಭೀರವಾದ ಪಾತ್ರ. ಬೇರೆ ಸಿನಿಮಾಗಳಿಗಿಂತ ಬಹಳ ಭಿನ್ನವಾದ ಶರ್ಮಿಳಾಳನ್ನು ನೀವು ಇಲ್ಲಿ ನೋಡಬಹುದು’ ಎನ್ನುತ್ತಾರೆ ಶರ್ಮಿಳಾ ಮಾಂಡ್ರೆ. ನಟಿ ಸಂಯುಕ್ತ ಹೊರನಾಡು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಒಲಿವರ್ ಎಲ್ವಿಸ್ ಹಾಗೂ ಮನೋಜ್ ಬೆಳ್ಳೂರು ವಿಎಫ್‌ಎಕ್ಸ್ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.