ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿಮಾಮನ ಮನೆಯಲ್ಲಿ ಆರತಕ್ಷತೆ: ಪುತ್ರ ಮನೋರಂಜನ್‌ ಮದುವೆ ಸಂಭ್ರಮ

Last Updated 20 ಆಗಸ್ಟ್ 2022, 7:36 IST
ಅಕ್ಷರ ಗಾತ್ರ

ಚಂದನವನದ ಖ್ಯಾತ ನಟಕ್ರೇಜಿಸ್ಟಾರ್‌ ರವಿಚಂದ್ರನ್‌ ಮನೆಯಲ್ಲಿ ಮದುವೆಸಂಭ್ರಮ ಮನೆ ಮಾಡಿದೆ. ಅವರ ಹಿರಿಯ ಪುತ್ರ ಹಾಗೂ ನಟ ಮನೋರಂಜನ್‌ ವಿವಾಹವಾಗುತ್ತಿದ್ದಾರೆ.

ದೂರದ ಸಂಬಂಧಿಯಾದ ಯುವತಿ ಸಂಗೀತಾ ಅವರನ್ನು ಮನೋರಂಜನ್‌ ಕೈಡಿಯುತ್ತಿದ್ದಾರೆ.ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿರುವ ತ್ರಿಪುರವಾಸಿನಿಯಲ್ಲಿ ಶುಕ್ರವಾರದಿಂದ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ. ಮೂರು ದಿನಗಳ ಕಾಲ ಮದುವೆ ನಡೆಯಲಿದೆ.

ಶುಕ್ರವಾರ ಮೆಹಂದಿ ಹಾಗು ಅರಿಶಿನ ಶಾಸ್ತ್ರಗಳು ನಡೆದಿವೆ. 22ಕ್ಕೆ ಮದುವೆ ಕಾರ್ಯಕ್ರಮಗಳು ಮುಗಿಯಲಿವೆ ಎಂದು ರವೀಂದ್ರನ್‌ ಕುಟುಂಬದ ಮೂಲಗಳು ತಿಳಿಸಿವೆ. ಮದುವೆ ಕಾರ್ಯಕ್ರಮಕ್ಕೆ ಸಿನಿಮಾರಂಗದ ಗಣ್ಯರು, ಆಪ್ತರು ಹಾಗೂ ಸಂಬಂಧಿಕರುಮಾತ್ರ ಭಾಗವಹಿಸುತ್ತಿದ್ದಾರೆ.

ಶನಿವಾರ ಸಂಜೆ 7 ಗಂಟೆಗೆ ವಧುವಿನ ಕಡೆಯವರ ಆರತಕ್ಷತೆಯಲ್ಲಿ ಸಿನಿಮಾರಂಗದ ಗಣ್ಯರು ಆಗಮಿಸಲಿದ್ದಾರೆ. ಮನೋಜನ್‌ ತಮ್ಮ ಸ್ನೇಹಿತರಿಗಾಗಿ ಪ್ರತ್ಯೇಕ ಆರತಕ್ಷತೆ ಆಯೋಜಿಸಿದ್ದಾರೆ.

34 ವರ್ಷದ ಮನೋರಂಜನ್ ತಮ್ಮ ಸಂಬಂಧಿಕರ ಕುಟುಂಬದಸಂಗೀತಾ ಅವರೊಂದಿಗೆ ವಿವಾಹವಾಗುತ್ತಿರುವುದು ವಿಶೇಷ. 2017 ರಲ್ಲಿ ಸಾಹೇಬ ಚಿತ್ರದ ಮೂಲಕ ಚಂದನವನಕ್ಕೆ ಮನೋರಂಜನ್ ಮನೋರಂಜನ್‌ ಪದಾರ್ಪಣೆ ಮಾಡಿದ್ದರು. ನಂತರ ಅವರುಬೃಹಸ್ಪತಿ, ಮುಗಿಲ್‌ಪೇಟೆ, ಪ್ರಾರಂಭ ಚಿತ್ರಗಳಲ್ಲಿ ನಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT