ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹ್ಯಾಪಿಲಿ ಮ್ಯಾರೀಡ್‌’ ಎನ್ನುತ್ತಿದ್ದಾರೆ ಮಾನ್ವಿತಾ!

Last Updated 30 ಆಗಸ್ಟ್ 2021, 9:55 IST
ಅಕ್ಷರ ಗಾತ್ರ

‘ಟಗರು ಪುಟ್ಟಿ’ ಎಂದೇ ಖ್ಯಾತಿ ಪಡೆದಿರುವ ನಟಿ ಮಾನ್ವಿತಾ ಕಾಮತ್‌ ತಮ್ಮ ಮುಂದಿನ ಚಿತ್ರ ಯಾವುದು ಎನ್ನುವುದನ್ನು ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ‘ಹ್ಯಾಪಿಲಿ ಮ್ಯಾರೀಡ್‌’ನಲ್ಲಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್‌ ಅವರಿಗೆ ಜೋಡಿಯಾಗಿ ಮಾನ್ವಿತಾ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರಕ್ಕೆಅರುಣ್‌ ಕುಮಾರ್‌ ಎಂ. ಹಾಗೂ ಸಾಬು ಅಲೋಷಿಯಸ್‌ ನಿರ್ದೇಶನವಿದ್ದು, ಬಿಜಿ ಅರುಣ್‌, ಜೋಸ್‌ಕುಟ್ಟಿ ಮಾಡತ್ತಿಲ್‌ ಹಾಗೂ ರಂಜಿತ್‌ ಮಣಂಬರಕ್ಕಾಟ್‌ ಚಿತ್ರದ ನಿರ್ಮಾಪಕರಾಗಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿಎಂಟು ತಿಂಗಳು ವೈಟ್‌ ಟ್ರೈನಿಂಗ್‌, ಪಥ್ಯಕ್ರಮದ ಮುಖಾಂತರ ತೂಕ ಇಳಿಸಿಕೊಂಡು, ಹೊಸ ಸಿನಿಮಾ ಪ್ರಾಜೆಕ್ಟ್‌ಗಳಿಗೆ ಮಾನ್ವಿತಾ ಸಜ್ಜಾಗಿದ್ದರು. ‘ಟಗರು’, ’ಇಂಡಿಯಾ ವರ್ಸಸ್‌ ಇಂಗ್ಲೆಡ್‌‘ ಚಿತ್ರದ ಬಳಿಕ ‘ಶಿವ 143’ ಚಿತ್ರದಲ್ಲಿ ರಾಜ್‌ಕುಮಾರ್‌ ಅವರ ಮೊಮ್ಮಗ ಧೀರೇನ್‌ ಅವರಿಗೆ ಜೋಡಿಯಾಗಿ ಮಾನ್ವಿತಾ ಅವರು ನಟಿಸಿದ್ದರು.ಈ ಚಿತ್ರದ ಚಿತ್ರೀಕರಣ, ಡಬ್ಬಿಂಗ್‌ ಎಲ್ಲವೂ ಮುಗಿದಿದೆ. ಚಿತ್ರಮಂದಿರದಲ್ಲೇ ಈ ಚಿತ್ರ ಬಿಡುಗಡೆಗೆ ಚಿತ್ರತಂಡ ಕಾಯುತ್ತಿದೆ. ಮಾನ್ವಿತಾ ನಟನೆಯ ದ್ವಿಭಾಷಾ ಚಿತ್ರ‘ರಾಜಸ್ಥಾನ್‌ ಡೈರೀಸ್‌’ ಕೂಡಾ ಬಿಡುಗಡೆಗೆ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT