ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮ್ಯಾಟ್ನಿ’ ಶೂಟಿಂಗ್‌ ಪೂರ್ಣ

Published 15 ಸೆಪ್ಟೆಂಬರ್ 2023, 23:40 IST
Last Updated 15 ಸೆಪ್ಟೆಂಬರ್ 2023, 23:40 IST
ಅಕ್ಷರ ಗಾತ್ರ

ನಟ ಸತೀಶ್‌ ನೀನಾಸಂ ನಟನೆಯ ‘ಮ್ಯಾಟ್ನಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಸಿನಿಮಾದ ‘ಸಂಜೆ ಮೇಲೆ ಸುಮ್ನೆ ಫೋನ್‌ ಮಾಡ್ಲ ನಿಂಗೆ...’ ಎಂಬ ಹಾಡು ಬಿಡುಗಡೆಯಾಗಿತ್ತು. ಇದರಲ್ಲಿ ನಟಿ ರಚಿತಾ ರಾಮ್‌ ಜೊತೆ ಸತೀಶ್‌ ಹೆಜ್ಜೆ ಹಾಕಿದ್ದರು. ಇದೀಗ ಅದೇ ಚಿತ್ರದ ಮತ್ತೊಂದು ಹಾಡಿಗೆ ಗೆಳೆಯರ ಜೊತೆಗೂಡಿ ಪಾರ್ಟಿ ಮಾಡಿದ್ದಾರೆ ನಟ ಸತೀಶ್‌.

‘ಅಯೋಗ್ಯ’ ಸಿನಿಮಾ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ನೀನಾಸಂ ಸತೀಶ್‌ ಹಾಗೂ ರಚಿತಾ ರಾಮ್‌ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಈ ಸಿನಿಮಾ ಮೂಲಕ ಬರುತ್ತಿದೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಹೈಕ್ಲಾಸ್‌ ಹುಡುಗನ ಪಾತ್ರದಲ್ಲಿ ಸತೀಶ್‌ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮನೋಹರ್‌ ಕಾಂಪಲ್ಲಿ ಆ್ಯಕ್ಷನ್‌ ಕಟ್‌ ಹೇಳಿರುವ ‘ಮ್ಯಾಟ್ನಿ’ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ‘ಬಾರೋ ಬಾರೋ ಬಾರೋ..’ ಎಂಬ ಪಾರ್ಟಿ ಹಾಡಿನ ಚಿತ್ರೀಕರಣ ಬೆಂಗಳೂರಿನ ಪಬ್‌ ಒಂದರಲ್ಲಿ ನಡೆಯಿತು. ಸುಮಾರು 200 ಜನರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಟರಾದ ನಾಗಭೂಷಣ್‌, ಶಿವರಾಜ್‌ ಕೆ.ಆರ್.ಪೇಟೆ, ಪೂರ್ಣಚಂದ್ರ ಮೈಸೂರು ಅವರೂ ಸತೀಶ್‌ ಅವರಿಗೆ ಸಾಥ್‌ ನೀಡಿದ್ದರು. 

ಈ ಹಾಡಿನ ಶೂಟಿಂಗ್‌ ಪೂರ್ಣಗೊಳ್ಳುವ ಮೂಲಕ ಚಿತ್ರೀಕರಣವೂ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಆರಂಭಿಸಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT