ಶುಕ್ರವಾರ, ಫೆಬ್ರವರಿ 26, 2021
32 °C

₹22 ದಶಲಕ್ಷಕ್ಕೆ ನೃತ್ಯಮಾಂತ್ರಿಕ ಮೈಕಲ್ ಜಾಕ್ಸನ್ ಎಸ್ಟೇಟ್‌ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತನ್ನ ವಿಭಿನ್ನ ನೃತ್ಯಶೈಲಿಯ ಮೂಲಕ ಜಗತ್ತಿನಾದ್ಯಂತ ಹೆಸರುಗಳಿಸಿರುವ ಮೈಕಲ್‌ ಜಾಕ್ಸನ್‌ ಅವರು ತೀರಿಕೊಂಡು ಹತ್ತು ವರ್ಷಗಳು ಕಳೆದಿವೆ. ಈಗ ಅವರ ಎಸ್ಟೇಟ್‌ವೊಂದನ್ನು ₹ 22 ದಶಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. 

ನೆದರ್‌ಲೆಂಡ್‌ನ ರಾಂಚ್‌ನಲ್ಲಿರುವ ಈ ಎಸ್ಟೇಟ್‌ ಒಟ್ಟು 2,700 ಎಕರೆ ವಿಸ್ತೀರ್ಣ ಹೊಂದಿದೆ. ‘ಪೀಟರ್‌ ಪಾನ್ಸ್ ಫ್ಯಾಂಟಸಿ ವರ್ಲ್ಡ್‌’ ಎಂಬ ಹೆಸರಿನ ಈ ಎಸ್ಟೇಟ್‌ನಲ್ಲಿ ಒಂದು ಪ್ರಾಣಿ ಸಂಗ್ರಹಾಲಯ, ಒಂದು ರೈಲು, ಚಿತ್ರಮಂದಿರ ಹಾಗೂ ಥೀಮ್‌ ಪಾರ್ಕ್‌ಗಳಿವೆ.

ಜಾಕ್ಸನ್‌ ಅವರ ಕುಟುಂಬದ ಆಪ್ತರಾದ ರಾನ್ ಬರ್ಕೆ ಈ ಆಸ್ತಿಯನ್ನು ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಎಸ್ಟೇಟ್‌ಗೆ ‘ಸೈಕಾಮೋರ್‌ ವ್ಯಾಲಿ ರಾಂಚ್’ ಎಂದು ಕೆಲ ವರ್ಷಗಳ ಹಿಂದೆ ಮರುನಾಮಕರಣ ಮಾಡಲಾಗಿತ್ತು.

1988ರಲ್ಲಿ ಮೈಕಲ್ ಜಾಕ್ಸನ್‌ ಈ ಆಸ್ತಿಯನ್ನು 19.5 ದಶಲಕ್ಷಕ್ಕೆ ಖರೀದಿ ಮಾಡಿದ್ದರು. 2009ರಲ್ಲಿ ಪ್ರೊಪೊಫೊಲ್ ಎಂಬ ಅರಿವಳಿಕೆ ಮದ್ದಿನ ಅತಿಯಾದ ಸೇವನೆಯಿಂದ ಜಾಕ್ಸನ್ ಮರಣ ಹೊಂದಿದ್ದರು.

ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಅವರು ಪ್ರಕರಣದ ಕೊನೆಯವರೆಗೂ ರಾಂಚ್‌ನಲ್ಲಿಯೇ ಇದ್ದರು. ಅಂತಿಮವಾಗಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು. ಆದರೆ ಅವರು ಎಂದಿಗೂ ಎಸ್ಟೇಟ್‌ಗೆ ಮರಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು