ನಟ ರಾಜ್‌ಕುಮಾರ್ ಸಹೋದರ ವರದಪ್ಪನವರ ಮೊಮ್ಮಗ ಪೃಥ್ವಿ ರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ಅವರ ಅಭಿನಯದ ಚೊಚ್ಚಲ ಚಿತ್ರ ‘ಮಿಂಚುಹುಳು’ ಅಕ್ಟೊಬರ್ 4ರಂದು ತೆರೆಗೆ ಬರುತ್ತಿದೆ. ಮಹೇಶ್ ಕುಮಾರ್ ಅವರ ಕಥೆ, ಚಿತ್ರಕಥೆ, ನಿರ್ದೇಶನವಿರುವ ಈ ಚಿತ್ರಕ್ಕೆ ರಾಜಗೋಪಾಲ್ ದೊಡ್ಡಹುಲ್ಲೂರು ಬಂಡವಾಳ ಹೂಡಿದ್ದಾರೆ.
‘ನಗರ ಪ್ರದೇಶದಲ್ಲಿ ನಡೆಯುವ ಕಥೆ. ಜವಾಬ್ದಾರಿ ಇಲ್ಲದ ತಂದೆ ಹಾಗೂ ಮಗನ ನಡುವಿನ ಕಥೆ ಇದಾಗಿದ್ದು, ಅವರ ಬದುಕಿನ ಕಷ್ಟ, ಸವಾಲುಗಳನ್ನು ಹೇಳಿದ್ದೇವೆ. ಮಿಂಚು ಹುಳುವೊಂದನ್ನು ನೋಡಿದ ಮಗನಿಗೆ ಹೊಸ ಆಲೋಚನೆ ಬರುತ್ತದೆ. ಆ ಆಲೋಚನೆ ಏನು?, ಅದರಿಂದ ಬದುಕಿನಲ್ಲಿ ಏನೆಲ್ಲ ಆಗುತ್ತದೆ ಎಂಬುದು ಚಿತ್ರಕಥೆ. ಈ ಚಿತ್ರವಾಗಲು ಪುನೀತ್ ರಾಜ್‌ಕುಮಾರ್ ಅವರೇ ಕಾರಣ’ ಎಂದರು ನಿರ್ದೇಶಕರು.
ಭೂನಿ ಪಿಕ್ಚರ್ಸ್ ನಿರ್ಮಾಣದ ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತ, ಚಲ್ಲ ಛಾಯಾಚಿತ್ರಗ್ರಹಣ, ಅಂಜಿ ಕೆ. ವೀರ ಛಾಯಾಚಿತ್ರಗ್ರಹಣವಿದೆ. ಮಾಸ್ಟರ್‌ಪ್ರಿತಂ, ಪರಶಿವ ಮೂರ್ತಿ, ರಶ್ಮಿ ಗೌಡ, ಪೂರ್ವಿಕಾ ಮುಂತಾದವರು ತಾರಾಗಣದಲ್ಲಿದ್ದಾರೆ.