ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬಾಯ್‌ಫ್ರೆಂಡ್‌ ಜೊತೆಗಿನ ರೊಮ್ಯಾಂಟಿಕ್‌ ಚಿತ್ರ ಪೋಸ್ಟ್‌ ಮಾಡಿದ ಮಿನಿಶಾ ಲಂಬಾ

Last Updated 27 ಆಗಸ್ಟ್ 2021, 7:26 IST
ಅಕ್ಷರ ಗಾತ್ರ

ಹೊಸ ಬಾಯ್‌ಫ್ರೆಂಡ್‌ ಜೊತೆಗಿನ ರೊಮ್ಯಾಂಟಿಕ್‌ ಚಿತ್ರಗಳನ್ನು ಬಾಲಿವುಡ್‌ ತಾರೆ ಮಿನಿಶಾ ಲಂಬಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ, ಹೊಸ ಬಾಯ್‌ಫ್ರೆಂಡ್‌ಗೆ(ಅಕ್ಕಿ ಮಾಲ್‌) ಜನ್ಮದಿನದ ಶುಭಾಶಯ ಕೋರಿದ್ದಾರೆ.

'ಹ್ಯಾಪಿ ಹ್ಯಾಪಿ ಅಕ್ಕಿ ಮಾಲ್... ನಿನಗೆ ಅಪಾರ ಪ್ರೀತಿ ಮತ್ತು ಸಂತೋಷ ಸಿಗಲೆಂದು ನಾನು ಬಯಸುತ್ತೇನೆ. ನೀನು ನನ್ನ ಆನಂದಕ್ಕೆ ಕಾರಣನಾದ ವ್ಯಕ್ತಿ. ಅತ್ಯುತ್ತಮ ಸಂಗಾತಿ. ಚೆಂದದ ಪಯಣದ ಜೊತೆಗಾರ. ನಿನಗೆ ಹುಟ್ಟು ಹಬ್ಬದ ಶುಭಾಶಯಗಳು' ಎಂದು ಮಿನಿಶಾ ಲಂಬಾ ಪೋಸ್ಟ್‌ ಮಾಡಿದ್ದಾರೆ.

2015 ರಲ್ಲಿ ಮಿನಿಶಾ ಲಂಬಾ ಹೋಟೆಲ್ ಉದ್ಯಮಿ ರಾನ್ ಥಾಮ್ ಅವರನ್ನು ಮದುವೆಯಾಗಿದ್ದರು. ಆದರೆ, 2019 ರಲ್ಲಿ ಅವರು ದೂರವಾಗಿದ್ದರು.

ಮನೀಶಾ ಬಾಲಿವುಡ್‌ನ ಹನಿಮೂನ್ ಟ್ರಾವೆಲ್ಸ್‌, ಬಚನಾ ಏ ಹಸಿನೋ, ಕಿಡ್ನಾಪ್ ಆ್ಯಂಡ್ ವೆಲ್‌ಡನ್ ಅಬ್ಬಾ ಚಿತ್ರಗಳಲ್ಲಿ ನಟಿಸಿದ್ದರು. ಹಿಂದಿಯ ಬಿಗ್‌ಬಾಸ್ ಸೀಸನ್ 8 ರಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT